ಬೆಳ್ತಂಗಡಿ (ದಕ್ಷಿಣ ಕನ್ನಡ):ಬೆಳ್ತಂಗಡಿತಾಲೂಕಿನ ಅಳದಂಗಡಿ ಸಮೀಪದ ನಾವರ ಗ್ರಾಮದ ಕೋಡೆಲ್ ಎಂಬಲ್ಲಿ ಹಳೆಯ ಮನೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ಅವಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಲಾಯಿಲ ಸೆರೆ ಹಿಡಿದರು.
ನಾವರ ಗ್ರಾಮದ ಕೋಡೆಲ್ ಧರ್ಣಪ್ಪ ಮಲೆಕುಡಿ ಎಂಬುವವರ ಹಳೆಯ ಮನೆಯಲ್ಲಿ ಮಳೆಗಾಲಕ್ಕೆ ಕಟ್ಟಿಗೆ ಸಂಗ್ರಹಿಸಿಡಲಾಗಿತ್ತು. ಈ ಕಟ್ಟಿಗೆ ರಾಶಿಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಮನೆಯವರು ಸ್ವಲ್ಪಹೊತ್ತಿನ ಬಳಿಕ ಹೋಗಬಹುದು ಎಂದು ತಿಳಿದಿದ್ದರು.