ಮಂಗಳೂರು :ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಓರ್ವ ಮಹಿಳೆ ಸಹಿತ ಇಬ್ಬರು ದಲ್ಲಾಳಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳಿಯಾರಗೋಳಿಯ ಅಬ್ದುಲ್ ಹಫೀಸ್ (55) ಮತ್ತು ಸುರತ್ಕಲ್ನ ಕಾಟಿಪಳ್ಳ ಕೃಷ್ಣಾಪುರದ ರಮ್ಲಾತ್ (46) ಎಂಬುವರು ಬಂಧಿತರು.
ಇವರು ಕೆಲ ದಿನಗಳ ಹಿಂದೆ ಕಾವೂರು ಪರಿಸರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು ಸೇರಿ ಹಲವು ಕಡೆಗಳಿಂದ ಯುವತಿಯರನ್ನು ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು.