ಮಂಗಳೂರು: 8ನೇ ತರಗತಿಯ ಬಾಲಕಿಗೆ ಬಸ್ ಟಿಕೆಟ್ನಲ್ಲಿ ನಿರ್ವಾಹಕ ತನ್ನ ಮೊಬೈಲ್ ನಂಬರನ್ನು ಬರೆದು ಕೊಟ್ಟಿರುವುದು ತಿಳಿದು ತಾಯಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಂಜುನಾಥ(21) ವಶಕ್ಕೆ ತೆಗೆದುಕೊಂಡಿರುವ ಆರೋಪಿ.
ಮಂಜುನಾಥ್ ಮಂಗಳೂರಿನ ಸ್ಟೇಟ್ ಬ್ಯಾಂಕ್ನಿಂದ ಬೋಂದೆಲ್ ನಡುವೆ ಸಂಚರಿಸುವ ನಂಬರ್ 19ರ ಖಾಸಗಿ ಸಿಟಿ ಬಸ್ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಬಸ್ನಲ್ಲಿ ಬರುತ್ತಿದ್ದ 8ನೇ ತರಗತಿ ಬಾಲಕಿಗೆ ಟಿಕೆಟ್ನಲ್ಲಿ ತನ್ನ ಫೋನ್ ನಂಬರ್ ಬರೆದುಕೊಟ್ಟಿದ್ದಾನೆ. ಈ ವಿಚಾರ ಬಾಲಕಿಯ ತಾಯಿಗೆ ತಿಳಿದು ಬಂದಿದೆ. ಆಕೆ ಸಾರ್ವಜನಿಕ ಸ್ಥಳದಲ್ಲೇ ಮಂಜುನಾಥನನ್ನು ತರಾಟೆಗೆ ತೆಗೆದುಕೊಂಡರು.