ಮಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಕೊರೊನಾ ಸೋಂಕು ಹರಡದಂತೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಮಾಸ್ಕ್ ಒದಗಿಸಲಾಗಿದೆ.
ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ: ಪೊಲೀಸರಿಗೆ ಫೇಸ್ ಶೀಲ್ಡ್ ಮಾಸ್ಕ್ - Prevention of coronavirus infection
ಖಾಸಗಿ ಸಂಸ್ಥೆಯೊಂದು ನೀಡಿರುವ ಫೇಸ್ ಶೀಲ್ಡ್ ಮಾಸ್ಕ್ ಅನ್ನು ಧರಿಸಿ ಮಂಗಳೂರಿನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ
ಹೆಲ್ಮೆಟ್ಗಳ ಮುಂಭಾಗದಲ್ಲಿ ಗ್ಲಾಸ್ ಮಾದರಿಯಲ್ಲಿ ಒಎಚ್ಪಿ ಶೀಟ್ಗಳಿಂದ ಫೇಸ್ ಶೀಲ್ಡ್ ತಯಾರಿಸಲಾಗಿದೆ. ಇದರಿಂದ ಎದರಿನಲ್ಲಿ ಇರುವ ವ್ಯಕ್ತಿ ಮಾತನಾಡುವಾಗ, ಸೀನುವಾಗ, ಕೆಮ್ಮುವಾಗ ಹೊರ ಬರುವ ಸೂಕ್ಷ್ಮಾಣುಗಳು ಮುಖಕ್ಕೆ ರಾಚದಂತೆ ತಡೆಯುತ್ತದೆ.
ಖಾಸಗಿ ಸಂಸ್ಥೆಯೊಂದು ಪೊಲೀಸ್ ಕಮಿಷನರ್ ಕಚೇರಿಗೆ ಈ ಮಾಸ್ಕ್ಗಳನ್ನು ಕೊಡುಗೆಯಾಗಿ ನೀಡಿದೆ. ಆಯ್ದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಒದಸಲಾಗಿದೆ. ಕಡ್ಡಾಯವಾಗಿ ಈ ಶೀಲ್ಡ್ ಮಾಸ್ಕ್ ಅನ್ನು ಧರಿಸಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.