ಕರ್ನಾಟಕ

karnataka

ETV Bharat / city

ಫಿಲಿಪೀನ್ಸ್​ನಿಂದ ಬಂದು ಸೀಮಂತಕ್ಕೂ ಮೊದಲು ಮತಚಲಾಯಿಸಿದ ಗರ್ಭಿಣಿ - undefined

ಸೀಮಂತಕ್ಕೆಂದು ವಿದೇಶದಿಂದ ಬಂದಿದ್ದ ಕಾವ್ಯಾ ಅವರು ಕೊಂಚಾಡಿಯಲ್ಲಿರುವ ಶ್ರೀ ರಾಮಾಶ್ರಮ‌ ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸೀಮಂತಕ್ಕೂ ಮುಗ್ರೋಡಿ ಗ್ರಾಮದಲ್ಲಿ ಸೀಮಂತಕ್ಕೂ ಮೊದಲು ಮತ ಚಲಾಯಿಸಿದ ಕಾವ್ಯಾ

By

Published : Apr 18, 2019, 3:26 PM IST

Updated : Apr 18, 2019, 4:13 PM IST

ಮಂಗಳೂರು:ಮುಗ್ರೋಡಿ ಗ್ರಾಮದ ನಿವಾಸಿ ಕಾವ್ಯಾ ಸಂಜೀವ ಎಂಬುವವರು ಸೀಮಂತಕ್ಕೂ ಮೊದಲು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ಮುಗ್ರೋಡಿ ನಿವಾಸಿಯಾಗಿರುವ ಕಾವ್ಯಾ ಅವರ ಪತಿ ಫಿಲಿಪೀನ್ಸ್​ನಲ್ಲಿ ಉದ್ಯೋಗಿ ಆಗಿದ್ದಾರೆ. ಸೀಮಂತಕ್ಕೆಂದು ಬಂದಿದ್ದ ಕಾವ್ಯಾ ಅವರು ಈ ವೇಳೆಯಲ್ಲಿ ಮತದಾನ ಮಾಡಿದ್ದಾರೆ. ಸೀಮಂತಕ್ಕಿಂತ ಮೊದಲು ಕೊಂಚಾಡಿಯಲ್ಲಿರುವ ಶ್ರೀ ರಾಮಾಶ್ರಮ‌ ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸೀಮಂತಕ್ಕೂ ಮುಗ್ರೋಡಿ ಗ್ರಾಮದಲ್ಲಿ ಸೀಮಂತಕ್ಕೂ ಮೊದಲು ಮತ ಚಲಾಯಿಸಿದ ಕಾವ್ಯಾ

ಬಳಿಕ ಮಾತನಾಡಿದ ಕಾವ್ಯಾ ಅವರು, ಸೀಮಂತ ಸಂಭ್ರಮದ ಜೊತೆಗೆ ನನ್ನದ ಹಕ್ಕು ಚಲಾಯಿಸಿದ್ದು ತುಂಬ ಸಂತೋಷವಾಗಿದೆ. ವಿದೇಶದಲ್ಲಿದ್ದರೇ ಈ ಅವಕಾಶ ತಪ್ಪಿಸಿಕೊಳ್ಳುತ್ತಿದೆ. ದೇಶದ ನಾಗರಿಕಳಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಹೇಳಿದರು.

Last Updated : Apr 18, 2019, 4:13 PM IST

For All Latest Updates

TAGGED:

ABOUT THE AUTHOR

...view details