ಭಟ್ಕಳ: ಸರ್ಕಾರದ ಕೋವಿಡ್ ನಿಯಮಾವಳಿ ಅನುಸಾರ ಬಕ್ರೀದ್ ಹಬ್ಬಕ್ಕೆ ಈ ಬಾರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗಾಗಲಿ, ಮೆರವಣಿಗೆಗಾಗಲಿ ಅವಕಾಶವಿರುವದಿಲ್ಲ ಎಂದು ಭಟ್ಕಳ ಉಪ ವಿಭಾಗಾಧಿಕಾರಿ ಭರತ್. ಎಸ್ ಹೇಳಿದ್ದಾರೆ.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗೆ ಅವಕಾಶವಿಲ್ಲ - ಬಕ್ರೀದ್ ಹಬ್ಬ
ಈ ಬಾರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗಾಗಲಿ, ಮೆರವಣಿಗೆಗಾಗಲಿ ಅವಕಾಶವಿರುವುದಿಲ್ಲ ಎಂದು ಭಟ್ಕಳ ಉಪ ವಿಭಾಗಾಧಿಕಾರಿ ಭರತ್.ಎಸ್ ಹೇಳಿದ್ದಾರೆ. ಭರತ್. ಎಸ್,, ಉಪವಿಭಾಗಾಧಿಕಾರಿ...ನಿಖಿಲ್.ಬಿ ಎಎಸ್‍ಪಿ ..ಭಟ್ಕಳ
![ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗೆ ಅವಕಾಶವಿಲ್ಲ dsdd](https://etvbharatimages.akamaized.net/etvbharat/prod-images/768-512-8208746-thumbnail-3x2-vish.jpg)
ಎಸಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ದಿನದಿಂದ ದಿನ ತನ್ನ ಕಬಂಧಬಾಹು ವಿಸ್ತರಿಸುತ್ತಲೇ ಇದೆ. ಇದರಿಂದ ಸಾಮೂಹಿಕ ಪ್ರಾರ್ಥನೆ ನಡೆಸಿದರೆ ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ಸಮುದಾಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಹಾಗಾಗಿ ಸರ್ಕಾರ ಈ ಬಾರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿದೆ. ಪ್ರತಿ ಮಸೀದಿಯಲ್ಲೂ 50 ಜನರ ಒಂದು ಬ್ಯಾಚ್ ಮಾಡಿ ಪ್ರಾರ್ಥನೆ ನಡೆಸಿ ಎಂದು ವಿನಂತಿಸಿದ್ದಾರೆ.
ಎಎಸ್‍ಪಿ ನಿಖಿಲ್ .ಬಿ ಮಾತನಾಡಿ, ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಯಾರೂ ಸಹ ಉಲ್ಲಂಘಿಸುವಂತಿಲ್ಲ. ಶಾಂತಿಭಂಗಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡುಬಂದರೆ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.