ಕರ್ನಾಟಕ

karnataka

ETV Bharat / city

ಅನಂತಪದ್ಮನಾಭ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕಡಬದ ಪ್ರವೀಣ ಎಡಪಡಿತ್ತಾಯ ನೇಮಕ - ಕೇರಳ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ

ಕಡಬದ ಪ್ರವೀಣ ಎಡಪಡಿತ್ತಾಯ ಅವರು ಕೇರಳದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕರಾಗಿದ್ದಾರೆ.

Praveen Edapadittaya
ಪ್ರವೀಣ ಎಡಪಡಿತ್ತಾಯ

By

Published : Dec 12, 2021, 9:40 AM IST

ನೆಲ್ಯಾಡಿ(ದಕ್ಷಿಣ ಕನ್ನಡ): ಕೇರಳದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕಡಬ ಮೂಲದ ಪ್ರವೀಣ ಎಡಪಡಿತ್ತಾಯ ಅವರು ನೇಮಕಗೊಂಡಿದ್ದಾರೆ.

ಪ್ರವೀಣ ಎಡಪಡಿತ್ತಾಯ ಅವರು ಕಡಬ ತಾಲೂಕಿನ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಪಿಲತಿಂಜ ನಿವಾಸಿಯಾಗಿದ್ದಾರೆ. ಅವರ ಅಜ್ಜ ವೆಂಕಟರಮಣ ಎಡಪಡಿತ್ತಾಯ, ದೊಡ್ಡಪ್ಪನಾದ ನಾರಾಯಣ ಎಡಪಡಿತ್ತಾಯ ಹಾಗೂ ಚಿಕ್ಕಪ್ಪ ಗೋವಿಂದ ಎಡಪಡಿತ್ತಾಯ ಕೂಡ ಕೇರಳದ ತಿರುವನಂತಪುರಂನಲ್ಲಿರುವ ಈ ವಿಶ್ವ ಪ್ರಸಿದ್ಧ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರವೀಣ ಉತ್ತಮ ಕೃಷಿಕರಾಗಿದ್ದು, ಪೌರೋಹಿತ್ಯವನ್ನೂ ಕಲಿತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಈ ಹಿಂದಿನಿಂದಲೂ ಕೊಕ್ಕಡದ ಎಡಪಡಿತ್ತಾಯ, ಶಬರಾಯ, ಉಪ್ಪಾರ್ಣ, ಬಾಳ್ತಿಲ್ಲಾಯ, ತೋಡ್ತಿಲ್ಲಾಯ ಮನೆತನದ ಸದಸ್ಯರಿಗೆ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.

ABOUT THE AUTHOR

...view details