ಕರ್ನಾಟಕ

karnataka

ETV Bharat / city

ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಓರ್ವನ ಬಂಧನ - manglore Fake document news

ನಕಲಿ ದಾಖಲೆ ಸೃಷ್ಟಿಸಿ 7 ಲಕ್ಷ ರೂ. ವಾಹನ ಸಾಲ ಪಡೆದು ವಂಚನೆ ಮಾಡಿದ ಓರ್ವನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

police arrest
ಓರ್ವನ ಬಂಧನ

By

Published : Dec 28, 2019, 7:37 AM IST

ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ 7 ಲಕ್ಷ ರೂ. ವಾಹನ ಸಾಲ ಪಡೆದು ವಂಚನೆ ಮಾಡಿದ ಓರ್ವನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಪಂಪ್​ವೆಲ್ ಶೆಟ್ಟಿ ಅಪಾರ್ಟ್​ಮೆಂಟ್ ನಿವಾಸಿ ಬಶೀರ್ ಅಲಿಯಾಸ್ ಹಸನ್ ಬಶೀರ್ (42) ಬಂಧಿತ ಆರೋಪಿ.

ಇವನು ಕಾರ್ವಾನ್ ಆಟೋ ಮೊಬೈಲ್​ ವಿವಿಧ ಕಂಪನಿಯ ಕಾರು ಮಾರಾಟಗಾರರು ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆಯನ್ನು ಸೃಷ್ಟಿಸಿ, ಫರಂಗಿ ಪೇಟೆಯಲ್ಲಿರುವ ಸುಮಂಗಲ ಕೋ.ಅಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದು ವಂಚಿಸಿದ್ದಾನೆ ಎಂದು ದೂರು ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜೊತೆಗೆ ವಿವಿಧ ಬ್ಯಾಂಕ್​ಗಳಲ್ಲಿ ನಕಲಿ ದಾಖಲೆ ನೀಡಿ 2 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ABOUT THE AUTHOR

...view details