ಕರ್ನಾಟಕ

karnataka

ETV Bharat / city

'ಬಿ.ಸಿ.ನಾಗೇಶ್​​ ಗೋ ಬ್ಯಾಕ್': ಮಂಗಳೂರಿನಲ್ಲಿ ಸಿಎಫ್​ಐನಿಂದ ಘೋಷಣೆ - ಮಂಗಳೂರಿನಲ್ಲಿ ಸಿಎಫ್​ಐನಿಂದ ಘೋಷಣೆ

ಮಂಗಳೂರು‌ ನಗರದ ಹಂಪನಕಟ್ಟೆ ಬಳಿಯ ಪದವಿ ಪೂರ್ವ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಸಚಿವ ಬಿ.ಸಿ.ನಾಗೇಶ್ ಆಗಮಿಸಿದ್ದ ವೇಳೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಬಿ.ಸಿ.ನಾಗೇಶ್​​ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.

Pfi slogan against Minister B.c.nagesh
'ಬಿ.ಸಿ.ನಾಗೇಶ್​​ ಗೋ ಬ್ಯಾಕ್' : ಮಂಗಳೂರಿನಲ್ಲಿ ಪಿಎಫ್​ಐನಿಂದ ಘೋಷಣೆ

By

Published : Apr 27, 2022, 12:50 PM IST

Updated : Apr 27, 2022, 1:24 PM IST

ಮಂಗಳೂರು: ನಗರದಲ್ಲಿ 4.80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ‌ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಆಗಮಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​​ ಅವರಿಗೆ ಸಿಎಫ್​ಐ ಸಂಘಟನೆಯ ಕಾರ್ಯಕರ್ತರು 'ಗೋ ಬ್ಯಾಕ್' ಘೋಷಣೆ ಕೂಗಿದ್ದು, ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ್ದಾರೆ. ಮಂಗಳೂರು‌ ನಗರದ ಹಂಪನಕಟ್ಟೆ ಬಳಿಯ ಪದವಿ ಪೂರ್ವ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಸಚಿವ ಬಿ.ಸಿ.ನಾಗೇಶ್ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಶಿಲಾನ್ಯಾಸಕ್ಕೆ ಸಚಿವ ಬಿ.ಸಿ.ನಾಗೇಶ್ ಆಗಮಿಸಿದ್ದ ವೇಳೆ ಸಿಎಫ್ಐ ಕಾರ್ಯಕರ್ತರು ಶಿಕ್ಷಣ ಸಚಿವರಿಗೆ ಗೋ ಬ್ಯಾಕ್ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ವೇಳೆ ರಸ್ತೆಯಲ್ಲೇ ಪೊಲೀಸರು ತಡೆದಿದ್ದಾರೆ. ಸಮವಸ್ತ್ರ ಹಂಚಿಕೆಯಲ್ಲಿ ಸಚಿವರಿಂದ ಗೋಲ್​ಮಾಲ್ ನಡೆದಿದೆ ಎಂದು ಆರೋಪಿಸಿ ಸಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದ್ದಾರೆ. ಈ ವೇಳೆ, ಕೆಲವು ಸಿಎಫ್​​ಐ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡ‌ ಪೊಲೀಸರು ಮಂಗಳೂರು ಪುರಭವನದ ಆವರಣದಲ್ಲಿ ಕೂಡಿ ಹಾಕಿದ್ದಾರೆ.

ಸಚಿವ ಬಿ.ಸಿ.ನಾಗೇಶ್ ವಿರುದ್ಧ ಸಿಎಫ್​ಐ ಪ್ರತಿಭಟನೆ

ಇದನ್ನೂ ಓದಿ:ಮಂಗಳೂರು ಪ್ರವಾಸ ಮುಂದೂಡಿ ವಿಮಾನ ನಿಲ್ದಾಣದಿಂದ ವಾಪಸ್​​​ ಆದ ಸಿಎಂ

Last Updated : Apr 27, 2022, 1:24 PM IST

ABOUT THE AUTHOR

...view details