ಕರ್ನಾಟಕ

karnataka

ETV Bharat / city

ಮಂಗಳೂರು: ಕೊರೊನಾ ಕರ್ಫ್ಯೂ ಸಮಯದಲ್ಲೂ ಜನಸಂಚಾರಕ್ಕಿಲ್ಲ ಕಡಿವಾಣ

ರಾಜ್ಯದಿಂದ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಆದರೂ ಕೂಡ ಮಂಗಳೂರು ನಗರದಲ್ಲಿ ಬೆಳಗಿನ ಸಮಯದಲ್ಲಿ ಸಂಚಾರ ದಟ್ಟಣೆ ಕಂಡುಬರುತ್ತಿದ್ದು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಸುಖಾಸುಮ್ಮನೆ ಓಡಾಡುವರ ಸಂಖ್ಯೆ ಹೆಚ್ಚಾಗುತ್ತಿದೆ.

Mangalore
ಕೊರೊನಾ ಕರ್ಫ್ಯೂ ಸಮಯದಲ್ಲೂ ಜನಸಂಚಾರಕ್ಕಿಲ್ಲ ಕಡಿವಾಣ

By

Published : May 1, 2021, 12:46 PM IST

ಮಂಗಳೂರು:ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಿದ್ದರೂ ಜನರು ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಕೆಲವರು ಪಾಲಿಸುತ್ತಿಲ್ಲ.

ಕೊರೊನಾ ಕರ್ಫ್ಯೂ ಸಮಯದಲ್ಲೂ ಜನಸಂಚಾರಕ್ಕಿಲ್ಲ ಕಡಿವಾಣ

ಜನತಾ ಕರ್ಫ್ಯೂ ನಡುವೆಯೂ ನಗರದಲ್ಲಿ ಬೆಳಗಿನ ಸಮಯದಲ್ಲಿ ಸಂಚಾರ ದಟ್ಟಣೆ ಕಂಡುಬರುತ್ತಿದ್ದು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಸುಖಾಸುಮ್ಮನೆ ಓಡಾಡುವರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆಳಗ್ಗೆ 10 ಗಂಟೆಯ ಬಳಿಕ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮನೆಗೆ ಹೋಗುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಕೂಡ ಅನಗತ್ಯ ಕಾರಣ ನೀಡಿ‌, ಓಡಾಟ ನಡೆಸುತ್ತಿರುವುದು ಕಂಡುಬಂದಿದೆ.

ಓದಿ:ತುಮಕೂರಿನಲ್ಲಿ 80ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಗೆ ವಕ್ಕರಿಸಿದ ಕೋವಿಡ್​

ABOUT THE AUTHOR

...view details