ಮಂಗಳೂರು :ನಗರದ ತೋಕೂರು ಎಂಬಲ್ಲಿ ಪಕ್ಕದ ಮನೆಯಾತನೇ ಮನೆಯೊಂದರ ಹಂಚು ತೆಗೆದು 11 ಲಕ್ಷ ರೂ. ಮೌಲ್ಯದ ನಗ-ನಗದು ಕಳವುಗೈದಿರುವ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪಣಂಬೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಕಳ್ಳತನವಾದ ಮನೆಯ ನೆರೆಮನೆಯ ನಿವಾಸಿ ಎಂದು ತಿಳಿದು ಬಂದಿದೆ. ಈತ ಆ ಮನೆಯವರೊಂದಿಗೆ ಬಹಳ ಆತ್ಮೀಯತೆಯಿಂದಿದ್ದು, ಆ ಮನೆಯ ಆಗು ಹೋಗುಗಳನ್ನು ತಿಳಿದುಕೊಂಡಿದ್ದನು. ಹಣಕಾಸಿನ ತೊಂದರೆಯಲ್ಲಿದ್ದ ಆರೋಪಿ ಪಕ್ಕದ ಮನೆಯವರು 2 ದಿನಗಳ ಕಾಲ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ ಮನೆಯ ಹೆಂಚು ತೆಗೆದು ಒಳಹೋಗಿ ಕಳ್ಳತನ ಮಾಡಿದ್ದಾನೆ.