ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿರುವ ಘಟನೆ ನಡೆದಿದೆ.
ಜಲಪಾತದ ಅಂಚಿನ ಗುಡ್ಡ ನಾಲ್ವರು ಯುವಕರ ಮೇಲೆ ದಿಢೀರನೆ ಕುಸಿದಿದೆ. ಘಟನೆಯಲ್ಲಿ ಮೂವರು ಯುವಕರು ಪಾರಾಗಿದ್ದು ಓರ್ವ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ. ನಾಪತ್ತೆಯಾದ ಯುವಕನ್ನು ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಸಮೀಪದ ನಿವಾಸಿ ಎಂದು ಹೇಳಲಾಗಿದೆ.