ಮಂಗಳೂರು:ಕಿತ್ತಲೆ ಹಣ್ಣು ವ್ಯಾಪಾರಿ ಹರೇಕಳ ಹಾಜಬ್ಬ ಅವರು ತನ್ನೂರಿಗೆ ಶಾಲೆಯನ್ನು ಕಟ್ಟಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಅವರಿಗೆ ಮಂಗಳೂರಿನ ದೇರಳಕಟ್ಟೆಯ ಸಂಸ್ಥೆಯೊಂದು ನೀಡಿದ ಉಚಿತ ಉಮ್ರಾಗೆ ತೆರಳುವ ಆಫರ್ ನಿರಾಕರಿಸಿದ್ದಾರೆ.
ಉಚಿತ ಉಮ್ರಾಗೆ ತೆರಳುವ ಆಫರ್ ನಿರಾಕರಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ - Padmashree Harekala Hajabba rejected Umra visit news
ನಿನ್ನೆ ಪದ್ಮಶ್ರೀ ಪ್ರಶಸ್ತಿ ಪಡೆದು ಇಂದು ಹುಟ್ಟೂರಿಗೆ ಆಗಮಿಸಿದ ಹಾಜಬ್ಬ ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಜಬ್ಬ ಅವರ ಶಾಲೆಯಲ್ಲಿ ಸನ್ಮಾನಿಸಿದವು. ಈ ಸಂದರ್ಭದಲ್ಲಿ ದೇರಳಕಟ್ಟೆಯ ಸಂಸ್ಥೆಯೊಂದು ಹಾಜಬ್ಬನವರಿಗೆ ಉಚಿತವಾಗಿ ಉಮ್ರಾಗೆ ತೆರಳುವ ಅವಕಾಶ ಒದಗಿಸುವ ಭರವಸೆಯನ್ನು ನೀಡಿ ಈ ಕುರಿತಾದ ಪತ್ರವನ್ನು ಹಸ್ತಾಂತರಿಸಿತು.

ಆದರೆ ವೇದಿಕೆಯಲ್ಲಿಯೇ ಸಂಸ್ಥೆ ನೀಡಿದ ಆಫರ್ ಅನ್ನು ಹರೇಕಳ ಹಾಜಬ್ಬ ಅವರು ನಿರಾಕರಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ನನಗೆ ಖಾಸಗಿಯಾಗಿ ಕೆಲವೊಂದು ಜವeಬ್ದಾರಿಗಳಿದ್ದು ಈ ಕಾರಣದಿಂದ ಉಚಿತ ಉಮ್ರಾ ಯಾತ್ರೆ ನಿರಾಕರಿಸಿದ್ದೇನೆ ಮತ್ತು ಅವರಿಂದ ಪತ್ರವನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದರು.