ಕರ್ನಾಟಕ

karnataka

ETV Bharat / city

ರಾಜ್ಯದಲ್ಲೇ ಮೊದಲ ಪ್ರಯೋಗ: ಪುತ್ತೂರಿನ ಶಾಲಾ ಮೈದಾನದಲ್ಲಿ ಭತ್ತ ನಾಟಿ ಯಶಸ್ವಿ

ಕುಂಬ್ರ ಕೆಪಿಎಸ್ ಶಾಲಾ ಆಡಳಿತ ಮಂಡಳಿಯು ಪೋಷಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಒಂದು ಕಾಲು ಎಕರೆ ಶಾಲಾ ಮೈದಾನದಲ್ಲಿ ಭತ್ತ ನಾಟಿ ಮಾಡಿತ್ತು. ಇದೀಗ 22 ಕ್ವಿಂಟಾಲ್​ ಭತ್ತ ಫಸಲು ಬಂದಿದೆ.

By

Published : Nov 28, 2021, 10:10 AM IST

ಶಾಲಾ ಮೈದಾನದಲ್ಲಿ ಭತ್ತ ನಾಟಿ
ಶಾಲಾ ಮೈದಾನದಲ್ಲಿ ಭತ್ತ ನಾಟಿ

ಪುತ್ತೂರು: ಶಾಲಾ ಆಟದ ಮೈದಾನದಲ್ಲಿ ಭತ್ತ ನಾಟಿ ಮಾಡುವ ಮೂಲಕ ಕುಂಬ್ರ ಕೆಪಿಎಸ್ ಶಾಲಾ ಆಡಳಿತ ಮಂಡಳಿ ಯಶಸ್ವಿಯಾಗಿದ್ದು, ಪೋಷಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಒಂದು ಕಾಲು ಎಕರೆ ಮೈದಾನದಲ್ಲಿ 22 ಕ್ವಿಂಟಾಲ್​ ಭತ್ತ ಫಸಲು ಬಂದಿದೆ.

ಕಳೆದ ಜುಲೈ ತಿಂಗಳಲ್ಲಿ ಆಟದ ಮೈದಾನದಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಕೃಷಿ ಮಾಡುವಂತೆ ಶಾಸಕರು ಕ್ಷೇತ್ರದ ಜನರಿಗೆ ಮನವಿ ಮಾಡಿದ್ದರು. ಖುದ್ದು ಶಾಸಕರೇ ಕೆಲವೊಂದು ಹಡೀಲು ಗದ್ದೆಯಲ್ಲಿ ಉಳುಮೆ ಮಾಡಿ ಸ್ಥಳೀಯರಿಗೆ ಪ್ರೇರಣೆ ನೀಡಿದ್ದರು. ಇದರ ಭಾಗವಾಗಿ ಕ್ಷೇತ್ರಾದ್ಯಂತ ನೂರಾರು ಹಡೀಲು ಗದ್ದೆಯಲ್ಲಿ ಭತ್ತದ ಕೃಷಿ ರಾರಾಜಿಸುವಂತಾಗಿತ್ತು.


ಕುಂಬ್ರ ಕೆಪಿಎಸ್ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ನಿತೀಶ್‌ಕುಮಾರ್ ಶಾಂತಿವನ ಅವರು ಊರಿನ ಗಣ್ಯರನ್ನು, ಪೋಷಕರನ್ನು ವಿವಿಧ ಸಂಘ ಸಂಸ್ಥೆ ಹಾಗೂ ಗ್ರಾ.ಪಂನ ಸಹಕಾರದಿಂದ ಶಾಲಾ ಆಟದ ಮೈದಾನದಲ್ಲಿ ಭತ್ತ ನಾಟಿ ಮಾಡಿಸಿದ್ದರು. ಜೊತೆಗೆ, ಕೃಷಿಗೆ ಸಾವಯವ ಗೊಬ್ಬರವನ್ನು ಬಳಸಲಾಗಿತ್ತು.

ಇದನ್ನೂ ಓದಿ:ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಕಂಬ

22 ಕ್ವಿಂಟಾಲ್​ ಭತ್ತ ಸಂಗ್ರಹ

ಈಗಾಗಲೇ ಭತ್ತ ಕಟಾವು ಮಾಡಲಾಗಿದೆ. ಕಟಾವು ಮಾಡುವ ಮುನ್ನ ಕುಂಬ್ರ ಮಾತೃಶ್ರೀ ಉದ್ಯಮಿ ಮೋಹನ್‌ದಾಸ್ ರೈ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಈ ಕುರಿತು ಮಾಹಿತಿ ನೀಡಿದ ಕೆಪಿಎಸ್ ಕಾರ್ಯಾಧ್ಯಕ್ಷ ನಿತೀಶ್‌ಕುಮಾರ್ ಶಾಂತಿವನ, 'ನಾವು ಮೊದಲ ಬಾರಿಗೆ ಆಟದ ಮೈದಾನದಲ್ಲಿ ನಾಟಿ ಮಾಡಿದ್ದೆವು. ಎಲ್ಲರೂ ನಮ್ಮ ಜೊತೆ ಕೈ ಜೋಡಿಸಿದ್ದರಿಂದ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಏನಾಗುತ್ತದೋ ಎಂಬ ಭಯ ನಮಗಿತ್ತು. ಆದರೆ ಪೃಕೃತ್ತಿ ನಮ್ಮನ್ನು ಕೈ ಬಿಟ್ಟಿಲ್ಲ, ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡಿದೆ. ನಮ್ಮ ಈ ಯೋಜನೆಗೆ ಪರ-ವಿರೋಧಗಳು ಕೇಳಿ ಬಂದಿದ್ದವು. ಅದೆಲ್ಲವನ್ನೂ ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದೇವೆ. ಭತ್ತ ಕೃಷಿಯ ಜೊತೆಗೆ ನಾವು ಶಾಲೆಯ ವಿದ್ಯಾರ್ಥಿಗಳಿಗೂ ಭತ್ತ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಲು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ. ಸುಮಾರು 22 ಕ್ವಿಂಟಾಲ್​ ಭತ್ತ ಸಂಗ್ರಹವಾಗಿದೆ' ಎಂದು ಹೇಳಿದರು.

ಇದನ್ನೂ ಓದಿ:Mann Ki Baat: ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮ

ಕುಂಬ್ರ ವರ್ತಕ ಸಂಘದ ಅಧ್ಯಕ್ಷ ಮಾದವ ರೈ ಪ್ರತಿಕ್ರಿಯಿಸಿ, 'ಆಟದ ಮೈದಾನದಲ್ಲಿ ಭತ್ತ ನಾಟಿ ಮಾಡುವ ಮೂಲಕ ಅನ್ನವನ್ನು ಪಡೆಯಲಾಗಿದೆ. ಆಟವಾಡಬೇಕಾದರೆ ಹೊಟ್ಟೆಗೆ ಅನ್ನ ಬೇಕು. ಇವೆರಡನ್ನೂ ಈ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ಮೈದಾನದಲ್ಲಿ ಇದು ಹೊಸ ಪ್ರಯೋಗವಾಗಿದ್ದು, ಉತ್ತಮ ಇಳುವರಿ ಬಂದಿರುವುದು ಸಂತೋಷದಾಯಕವಾಗಿದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು' ಎಂದರು.

ABOUT THE AUTHOR

...view details