ಮಂಗಳೂರು:ನಟ ಸೋನು ಸೂದ್ ನೆರವಿನಿಂದ ಮಂಗಳೂರಿನ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಗ್ಗೆ ಸೋನು ಸೂದ್ ಟ್ವೀಟ್ ಮಾಡಿದ್ದು, ಈ ವಾರದಲ್ಲಿ ನಮ್ಮ ಹೊಸ ಆಮ್ಲಜನಕ ಘಟಕ ಮಂಗಳೂರಿನ ಉಳ್ಳಾಲದಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದಾರೆ.
ಸೋನು ಸೂದ್ ನೆರವಿನಲ್ಲಿ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ರ್ಯಾಪಿಡ್ ಆಕ್ಸಿಜನ್ ಸೆಂಟರ್ ಅನ್ನು ಎರಡು ತಿಂಗಳ ಹಿಂದೆ ಆರಂಭಿಸಲಾಗಿತ್ತು.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ, 64 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕವನ್ನು ಸೋನುಸೂದ್ ಫೌಂಡೇಶನ್ನಿಂದ ನೀಡುತ್ತಿದ್ದಾರೆ. ಇದಕ್ಕೆ ಶೇ.20ರಷ್ಟು ಅಂದರೆ 12.88 ಲಕ್ಷ ರೂ.ಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನೀಡಲಾಗಿದೆ. ಈ ವಾರ ಇದರ ಸ್ಥಾಪನೆ ಕಾರ್ಯ ನಡೆಯಲಿದೆ ಎಂದರು.
ಇದನ್ನೂ ಓದಿ:44ನೇ ವಯಸ್ಸಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸ್ ಆದ ಮಂಗಳೂರು ವಿವಿ ಕಾಲೇಜು ಅಟೆಂಡರ್