ಮಂಗಳೂರು : ಫ್ಲೋರ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿಯೋರ್ವರಿಗೆ ಅಪರಿಚಿತನೋರ್ವನು ಕರೆ ಮಾಡಿ ಸೈನಿಕನೆಂದು ನಂಬಿಸಿ ಮೈದಾ ಹಿಟ್ಟು ಖರೀದಿಸುವೆನೆಂದು ಹೇಳಿ 2.94 ಲಕ್ಷ ರೂ. ಬ್ಯಾಂಕ್ ಖಾತೆಯಿಂದ ಎಗರಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಸೈನಿಕನ ಸೋಗಿನಲ್ಲಿ ಮೈದಾ ಹಿಟ್ಟು ಖರೀದಿಸುವುದಾಗಿ ನಂಬಿಸಿ 2.94 ಲಕ್ಷ ರೂ. ವಂಚನೆ..! - ಸೈನಿಕನ ಹೆಸರಿನಲ್ಲಿ ಹಣ ವಂಚನೆ
ಮೈದಾ ಹಿಟ್ಟು ಖರೀದಿಸುವುದಾಗಿ ನಂಬಿಸಿ ಸೈನಿಕರ ಸೋಗಿನಲ್ಲಿ ಆನ್ಲೈನ್ ಮೂಲಕ 2.94 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕ್ಯೂಆರ್ ಕೋಡ್ ಬಳಸಿ ಮೋಸ ಮಾಡಿರುವುದಾಗಿ ದೂರುದಾರರು ತಿಳಿಸಿದ್ದಾರೆ.
Online money fraud : 2021 ಡಿ.17ರಂದು ಬೆಳಗ್ಗೆ ಮಹಿಳೆಯ ಮೊಬೈಲ್ ಫೋನ್ಗೆ ಅಪರಿಚಿತರನೋರ್ವ ಕರೆ ಮಾಡಿದ್ದ. ಆತ ತಾನು ಆರ್ಮಿ ಆಫೀಸರ್, ಹೆಸರು ಅಮನ್ ಕುಮಾರ್ ಎಂದು ಹೇಳಿಕೊಂಡಿದ್ದ. ಅಲ್ಲದೆ, ಮೈದಾ ಹಿಟ್ಟು ಖರೀದಿಸುವುದಾಗಿ ತಿಳಿಸಿ, ಅದರ ಹಣ ಪಾವತಿಗೆ ಕ್ಯೂಆರ್ ಕೋಡ್ (QR CODE) ಕಳುಹಿಸುವಂತೆ ತಿಳಿಸಿದ್ದನಂತೆ. ಅದರಂತೆ ಆಕೆ ತನ್ನ ಮೊಬೈಲ್ ಸಂಖ್ಯೆಗೆ ಬಂದ ಕ್ಯೂಆರ್ ಕೋಡ್ನ್ನು ನೀಡಿದ್ದಾರೆ. ಆತ ದೃಢತೆಗಾಗಿ ಮೊದಲು 1ರೂ. ಬಳಿಕ 2 ರೂ. ಪಾವತಿಸಿದ್ದಾನೆ.
ಮೈದಾ ಹಿಟ್ಟು ಖರೀದಿಸುವುದಾಗಿ ಹೇಳಿ ಹಣ ವಂಚನೆ: ಬಳಿಕ ಕ್ಯೂಆರ್ ಕೋಡ್ಗೆ ಒಂದು ಒಟಿಪಿ ಬಂದಿದೆ ಅದನ್ನು ಹಾಕುವಂತೆ ತಿಳಿಸಿದ್ದಾನೆ. ಅದರಂತೆ ಮಹಿಳೆ ಒಟಿಪಿ ಹಾಕಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಆ ಸಂಖ್ಯೆ ದಾಖಲಿಸಿದ್ದು ತಪ್ಪಾಗಿದೆ, ಮತ್ತೆ ಅದೇ ಕ್ಯೂಆರ್ ಕೋಡ್ ಹಾಕುವಂತೆ ತಿಳಿಸಿದ್ದಾನೆ. ಇದೇ ರೀತಿ ಹಂತ ಹಂತವಾಗಿ ಐದು ಬಾರಿ ಕ್ಯೂಆರ್ ಕೋಡ್ ನಮೂದಿಸುವಂತೆ ತಿಳಿಸಿ ಒಟ್ಟು 2,94,830 ರೂ. ಅನ್ನು ತನ್ನ ಖಾತೆಗೆ ವರ್ಗಾಯಿಸಿರುತ್ತಾನೆ. ಆ ಬಳಿಕ ಆಕೆಗೆ ತಾನು ಮೋಸ ಹೋಗಿದ್ದು ಅರಿವಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.