ಮಂಗಳೂರು (ದಕ್ಷಿಣಕನ್ನಡ):2020ರಎನ್‌ಆರ್‌ಐಎಫ್ ಶ್ರೇಯಾಂಕದಲ್ಲಿ ಸುರತ್ಕಲ್ನ ಎನ್‌ಐಟಿಕೆ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ) ಅತ್ಯುನ್ನತ ಸಾಧನೆ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ ಎನ್‌ಐಟಿಕೆ ಎಲ್ಲಾ ನಿಯತಾಂಕಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 6.05 ಪಾಯಿಂಟ್ಗಳ ಏರಿಕೆಯೊಂದಿಗೆ ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ಸಾಧಿಸಿದೆ ಎಂದು ಎನ್‌ಐಟಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಎನ್‌ಐಟಿಕೆಯು ಎಂಜಿನಿಯರಿಂಗ್ ಸಂಸ್ಥೆಗಳ ಶ್ರೇಯಾಂಕದಲ್ಲಿ 13ನೇ ಸ್ಥಾನ ಹಾಗೂ ಈ ವರ್ಷದ ಒಟ್ಟಾರೆ ಶ್ರೇಯಾಂಕದಲ್ಲಿ 33ನೇ ಸ್ಥಾನದಲ್ಲಿದೆ. ಇದಲ್ಲದೆ ಎನ್‌ಐಟಿಗಳ ಸಾಲಿನಲ್ಲಿ ಎನ್‌ಐಟಿಕೆಯು ಎರಡನೇ ಸ್ಥಾನದಲ್ಲಿದೆ. ದೇಶಾದ್ಯಂತ ಇರುವ 31 ಎನ್‌ಐಟಿಗಳಲ್ಲಿ ಎನ್‌ಐಟಿಕೆಯು ತನ್ನ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳನ್ನು (ಯುಜಿ ಕಾರ್ಯಕ್ರಮಗಳು) ಗರಿಷ್ಠ ಆರು ವರ್ಷಗಳವರೆಗೆ ಮಾನ್ಯತೆ ಪಡೆದಿರುವ ಏಕೈಕ ಸಂಸ್ಥೆಯಾಗಿದೆ. ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಧನಸಹಾಯ ಸಂಸ್ಥೆಗಳಿಂದ ಹಲವಾರು ಪ್ರತಿಷ್ಟಿತ ಮತ್ತು ಹೆಚ್ಚಿನ ಮೌಲ್ಯದ ಸಂಶೋಧನಾ ಅನುದಾನವನ್ನು ಪಡೆಯುವಲ್ಲಿ ಸಂಸ್ಥೆಯ ಅಧ್ಯಾಪಕರು ಯಶಸ್ವಿಯಾಗಿದ್ದಾರೆ.