ಕರ್ನಾಟಕ

karnataka

ETV Bharat / city

ಮಂಗಳೂರು ನಿಸರ್ಗ ಕೊಲೆ ಪ್ರಕರಣ.. ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್​​​​ - undefined

2017ರ ಸೆಪ್ಟೆಂಬರ್ 15 ರಂದು ನಿಸರ್ಗ ಎಂಬಾತನನ್ನು ಕೊಲೆ ಮಾಡಲಾಗಿದ್ದು, ಪ್ರಕರಣದ ನಾಲ್ವರು ಆರೋಪಿಗಳನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.

Nisargha murder case

By

Published : Jun 22, 2019, 9:12 AM IST

ಮಂಗಳೂರು: ನಗರದ ಹೊರವಲಯದಲ್ಲಿರುವ ಅಳಪೆ ಗ್ರಾಮದ ಕೊಡಕ್ಕಲ್ ರೈಲ್ವೆ ಸೇತುವೆ ಬಳಿಯ ಪಾರ್ಕ್‌​ವೊಂದರಲ್ಲಿ ನಿಸರ್ಗ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದಿದೆ.

ಪುನೀತ್, ಶರತ್, ನಿಖಿಲ್ ಮತ್ತು ಪ್ರಕಾಶ್ ಖುಲಾಸೆಗೊಂಡ ಆರೋಪಿಗಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾರದಾ ಬಿ. ಅವರು, ಪ್ರಕರಣದ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.

ವೀರನಗರ ನಿವಾಸಿ ಪುನೀತ್ ಎಂಬಾತನಿಗೆ ನಿಸರ್ಗ ಎಂಬ ಯುವಕ ಹೀಯಾಳಿಸಿದ ಬಗ್ಗೆ ಮನಸ್ತಾಪವಿತ್ತು. ಆದ್ದರಿಂದ 2017ರ ಸೆಪ್ಟಂಬರ್ 15 ರಂದು ನಿಸರ್ಗ ಎಂಬಾತನನ್ನು ಕೊಲೆ ಮಾಡುವ ಉದ್ದೇಶದಿಂದ ಪುನೀತ್ ತನ್ನ ಸೇಹಿತರಾದ ಶರತ್, ನಿಖಿಲ್, ಪ್ರಕಾಶ್ ಜತೆ ವೀರನಗರದ ಮೊಸರು ಕುಡಿಕೆ ಉತ್ಸವಕ್ಕೆ ಹೋಗಿ ಹಿಂದಿರುಗಿ ಬರುತ್ತಿದ್ದ ಸಂದರ್ಭ ರೈಲ್ವೆ ಟ್ರಾಕ್‌ನಲ್ಲಿ ಕುಳಿತಿದ್ದ ನಿಸರ್ಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಸಂದರ್ಭ ನಿಸರ್ಗನ ಗೆಳೆಯರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ ಆತ ಚೇತರಿಸಿಕೊಳ್ಳದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ಪರವಾಗಿ ನ್ಯಾಯವಾದಿ ವೇಣುಕುಮಾರ್ ಹಾಗೂ ಯುವರಾಜ್ ಕೆ. ಅಮೀನ್ ವಾದಿಸಿದ್ದರು. ಇದೀಗ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣವನ್ನು ಖುಲಾಸೆಗೊಳಿಸಿದೆ.

For All Latest Updates

TAGGED:

ABOUT THE AUTHOR

...view details