ಕರ್ನಾಟಕ

karnataka

ETV Bharat / city

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 45 ಚೆಕ್ ಪೋಸ್ಟ್: ಶಶಿಕುಮಾರ್ ಎನ್.

ಮನಪಾ ವ್ಯಾಪ್ತಿಯ ಎಲ್ಲ ರಸ್ತೆಗಳು ಕೂಡುವಲ್ಲಿ, ಗಡಿ ಪ್ರದೇಶಗಳಲ್ಲಿ ಹಾಗೂ ನಗರದೊಳಗೆಯೂ ಈ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಪಿಎಸ್ಐ ಗಿಂತ ಕಡಿಮೆಯಿರದ ಅಧಿಕಾರಿಗಳು ಹಾಗೂ ಕನಿಷ್ಠ 8-10 ಸಿಬ್ಬಂದಿ ಇರುತ್ತಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 70 ಪ್ರತಿಶತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇಂದು ನಿಯೋಜನೆ ಮಾಡಲಾಗುತ್ತದೆ.

night curfew 45 check post in Mangalore Police Commissionerate
ಶಶಿಕುಮಾರ್ ಎನ್

By

Published : Apr 10, 2021, 4:56 PM IST

ಮಂಗಳೂರು: ಕೊರೊನಾ ‌ಕರ್ಫ್ಯೂ ಇಂದಿನಿಂದ ಎ.20ರವರೆಗೆ ದ.ಕ.ಜಿಲ್ಲೆಯಲ್ಲಿ ಜಾರಿಯಲ್ಲಿದ್ದು, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದ್ದು, 45 ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಹೇಳಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನಪಾ ವ್ಯಾಪ್ತಿಯ ಎಲ್ಲ ರಸ್ತೆಗಳು ಕೂಡುವಲ್ಲಿ, ಗಡಿ ಪ್ರದೇಶಗಳಲ್ಲಿ ಹಾಗೂ ನಗರದೊಳಗೆಯೂ ಈ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಪಿಎಸ್ಐ ಗಿಂತ ಕಡಿಮೆಯಿರದ ಅಧಿಕಾರಿಗಳು ಹಾಗೂ ಕನಿಷ್ಠ 8 - 10 ಸಿಬ್ಬಂದಿ ಇರುತ್ತಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 70 ಪ್ರತಿಶತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇಂದು ನಿಯೋಜನೆ ಮಾಡಲಾಗುತ್ತದೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 45 ಚೆಕ್ ಪೋಸ್ಟ್

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಕೊರೊನಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಹೊತ್ತಿನಲ್ಲಿ ವಾಹನಗಳ ಸಂಚಾರ, ಸಾರ್ವಜನಿಕ ಸಂಚಾರ ಹಾಗೂ ಇನ್ನಿತರ ಚಟುವಟಿಕೆಗಳನ್ನು ‌ನಿಷೇಧಿಸಿ ಆದೇಶಿಸಲಾಗಿದೆ. ಅಲ್ಲದೇ ಕಮಿಷನರೇಟ್ ವ್ಯಾಪ್ತಿಯ ಹೊರಗಡೆಯೂ ಅನಗತ್ಯ ಓಡಾಟ ಹಾಗೂ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಆದರೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಅವರ ಸಹಾಯಕರ ತುರ್ತು ಓಡಾಟಕ್ಕೆ ತೊಂದರೆಯಿಲ್ಲ. ರಾತ್ರಿ ಪಾಳಿಯ ನೌಕರಿಯಲ್ಲಿರುವವರು ಈ ಮಧ್ಯದಲ್ಲಿ ಓಡಾಟ ಮಾಡದೇ ಯಾವುದೇ ಆದೇಶ ಉಲ್ಲಂಘನೆ ಆಗದಂತೆ ತಮ್ಮ ಕರ್ತವ್ಯದಲ್ಲಿ ಇರಬಹುದು. ವೈದ್ಯಕೀಯ ಸೇವೆ ಹಾಗೂ ತುರ್ತು ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಸರಕುಸಾಗಣೆ ವಾಹನ, ಅತ್ಯವಶ್ಯಕ ಸೇವೆ ಒದಗಿಸುವ ವಾಹನ, ಹೋಮ್ ಡೆಲಿವರಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ.‌ ಬಸ್, ವಿಮಾನ ಹಾಗೂ ರೈಲು ಸಂಚಾರ ಮಾಡುವ ಪ್ರಯಾಣಿಕರು ಅಧಿಕೃತವಾಗಿ ಟಿಕೆಟ್ ಗಳನ್ನು ತಮ್ಮೊಂದಿಗೆ ಇರಿಸಿಕೊಳ್ಳಬೇಕು‌ ಎಂದು ಶಶಿಕುಮಾರ್ ಎನ್. ಹೇಳಿದರು.

ABOUT THE AUTHOR

...view details