ಕರ್ನಾಟಕ

karnataka

ETV Bharat / city

ಕೊರೊನಾ ವೈರಸ್​ ಕಾಟ: ಇಂದು‌ 10 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ - corona virus phobia

ಕೊರೊನಾ ಪಾಸಿಟಿವ್ ಬಂದಿದ್ದ ನಾಲ್ವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ ಎಂಟು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Negative and Positive Report
ಕೊರೊನಾ

By

Published : Apr 6, 2020, 9:17 PM IST

ಮಂಗಳೂರು: ಮಂಗಳೂರಿನಲ್ಲಿ ಇಂದು 10 ಮಂದಿ ಗಂಟಲು ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಲಾದ 21 ಮಂದಿ ವರದಿಯಲ್ಲಿ ನೆಗೆಟಿವ್ ಬಂದಿದೆ.

ಈವರೆಗೂ ಲ್ಯಾಬ್​​ಗೆ ಕಳುಹಿಸಿದ 331 ಮಂದಿಯಲ್ಲಿ 12 ಪಾಸಿಟಿವ್ ವರದಿ ಬಂದಿವೆ. ಇಂದು 21 ಮಂದಿ ಸೇರಿದಂತೆ ಇಲ್ಲಿಯವರೆಗೂ 38,652 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ.

ಜಿಲ್ಲಾಡಳಿತ ಪ್ರಕಟಣೆ

ಹೋಮ್ ಕ್ವಾರಂಟೈನ್​​​ನಲ್ಲಿ 4,237, ಇಎಸ್ಐ ಆಸ್ಪತ್ರೆ ಕ್ವಾರಂಟೈನ್​​ನಲ್ಲಿ 10 ಮಂದಿ ಇದ್ದಾರೆ. ಇಂದಿಗೆ 1,709 ಮಂದಿ 28 ದಿನದ ಹೋಮ್ ಕ್ವಾರಂಟೈನ್ ಪೂರೈಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details