ಕರ್ನಾಟಕ

karnataka

ETV Bharat / city

ಕಾವಿ ಎಂಬ ಬೆಂಕಿಗೆ ಕೈ ಹಾಕಿರುವ ಸಿದ್ದರಾಮಯ್ಯ & ಕಾಂಗ್ರೆಸ್ ಭಸ್ಮವಾಗಲಿದೆ : ಕಟೀಲ್‌ ಭವಿಷ್ಯ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇಟೆಸ್ಟ್​​ ನ್ಯೂಸ್​​

ಹಿಂದಿನಿಂದಲೂ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಗೌರವವಿಲ್ಲ. ಅವರು ತಾವು ನಾಸ್ತಿಕವಾದಿ ಎಂದು ಹೇಳುತ್ತಾರೆ. ಆದರೆ‌, ಕದ್ದುಮುಚ್ಚಿ ದೇವಾಲಯಗಳಿಗೆ ಹೋಗುತ್ತಾರೆ. ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ಹೋದರೆ ಏನಾಗುತ್ತದೆ ಎಂದು ಸವಾಲು ಹಾಕಿದ ಸಿದ್ದರಾಮಯ್ಯ ಬಳಿಕ ತಮ್ಮ ಸಿಎಂ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು..

Nalin Kumar Kateel slams against siddaramaiah
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Mar 26, 2022, 2:37 PM IST

ಮಂಗಳೂರು :ಸ್ವಾಮೀಜಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾವಿ ಎಂಬ ಬೆಂಕಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೈ ಹಾಕಿದ್ದಾರೆ‌. ಈ ಬೆಂಕಿಯಲ್ಲಿ ಸಿದ್ದರಾಮಯ್ಯರು ಹಾಗೂ ಅವರ ಕಾಂಗ್ರೆಸ್ ಭಸ್ಮವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಟೀಲ್​​, ಸಿದ್ದರಾಮಯ್ಯ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.

ವಿಧಾನಸಭೆಯ ಓರ್ವ ಹಿರಿಯ ನಾಯಕ, ಮಾಜಿ ಸಿಎಂ ಆಗಿರುವ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ದೇಶದ ಸಂಸ್ಕೃತಿ ಪರಂಪರೆ ಹಾಗೂ ಗುರು ಪೀಠಗಳ ಬಗ್ಗೆ ಅತಿ ಹೆಚ್ಚು ತಿಳಿದುಕೊಂಡವರು ಅವರು. ರಾಜ ಪೀಠಕ್ಕಿಂತ ಗುರು ಪೀಠವೇ ಶ್ರೇಷ್ಠವೆಂದು ನಂಬಿರುವ ಸಂಸ್ಕೃತಿ ನಮ್ಮದು. ಆದರೆ, ಸಿದ್ದರಾಮಯ್ಯ ಅವರು ಗುರುಪೀಠಗಳಿಗೆ ಗುರು ಸಂಸ್ಕೃತಿಗೆ ಅವಹೇಳನ, ಅವಮಾನ ಮಾಡಿದ್ದು ಸರಿಯಲ್ಲ‌. ಈ ಮೂಲಕ ಕಾಂಗ್ರೆಸ್ ಸರ್ವನಾಶವಾಗುವುದು ಖಂಡಿತ ಎಂದು ಭವಿಷ್ಯ ನುಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿರುವುದು..

ಹಿಂದಿನಿಂದಲೂ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಗೌರವವಿಲ್ಲ. ಅವರು ತಾವು ನಾಸ್ತಿಕವಾದಿ ಎಂದು ಹೇಳುತ್ತಾರೆ. ಆದರೆ‌, ಕದ್ದುಮುಚ್ಚಿ ದೇವಾಲಯಗಳಿಗೆ ಹೋಗುತ್ತಾರೆ. ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ಹೋದರೆ ಏನಾಗುತ್ತದೆ ಎಂದು ಸವಾಲು ಹಾಕಿದ ಸಿದ್ದರಾಮಯ್ಯ ಬಳಿಕ ತಮ್ಮ ಸಿಎಂ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಇದನ್ನೂ ಓದಿ:ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ : ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹ

For All Latest Updates

TAGGED:

ABOUT THE AUTHOR

...view details