ಕರ್ನಾಟಕ

karnataka

ETV Bharat / city

ಮುಲ್ಕಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ, ಆರೋಪಿ ಅರೆಸ್ಟ್ - ಹಣಕಾಸು ವಿಚಾರಕ್ಕೆ ಹತ್ಯೆ

ಹಣಕಾಸಿನ ವ್ಯವಹಾರಕ್ಕೆ ಉಂಟಾದ ವೈಮನಸ್ಸಿನಿಂದಾಗಿ ದಾರಿ ಮಧ್ಯೆ ಹರೀಶ್ ಸಾಲ್ಯಾನ್ ಎಂಬವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

murder one arrest in Mangalore
ಎಂ. ಮುರುಗನ್

By

Published : Mar 21, 2022, 10:12 PM IST

ಮಂಗಳೂರು: ಹಣಕಾಸಿನ ವಿಚಾರಕ್ಕೆ ಕಲ್ಲಿನಿಂದ ಹಲ್ಲೆ ನಡೆಸಿ ಹರೀಶ್ ಸಾಲ್ಯಾನ್ ಎಂಬವರನ್ನು ಕೊಲೆಗೈದ ಆರೋಪಿಯನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಮೂಲದ, ಸದ್ಯ ಮಂಗಳೂರಿನ ಬೆಳ್ಳಾಯೂರು ನಿವಾಸಿ ಎಂ. ಮುರುಗನ್(36) ಬಂಧಿತ ಆರೋಪಿ.

ಮಾರ್ಚ್ 19ರ ರಾತ್ರಿ ವೇಳೆ ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ನಿವಾಸಿ ಹರೀಶ್ ಸಾಲ್ಯಾನ್ (37) ಬಪ್ಪನಾಡು ದೇವಸ್ಥಾನಕ್ಕೆ ಬಂದಿದ್ದರು.‌ ಅಲ್ಲಿಂದ ಮರಳುವಾಗ ದಾರಿಮಧ್ಯೆ ಮುಲ್ಕಿ ಪೇಟೆಯ ಪೆಟ್ರೋಲ್ ಬಂಕ್ ಬಳಿ ಅವರನ್ನು ಕೊಲೆಗೈಯ್ಯಲಾಗಿತ್ತು. ಕೊಲೆಯಾದ ಜಾಗದಲ್ಲಿ ದೊರೆತ ವಸ್ತುಗಳ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಆರೋಪಿ ಎಂ.ಮುರುಗನ್ ಬಗ್ಗೆ ಅನುಮಾನಗೊಂಡ ಪೊಲೀಸರು ಮಾರ್ಚ್ 21ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಆತ ಹಣಕಾಸಿನ ವ್ಯವಹಾರದ ದ್ವೇಷದಿಂದ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ:ಪೈಲಟ್​ ಆಗಬೇಕೆಂದಿದ್ದವಳ ಬಾಳಲ್ಲಿ ವಿಧಿಯಾಟ.. ಬಾಲಕಿಯ ಕನಸು ನುಚ್ಚು ನೂರು ಮಾಡಿತು ಕಸದ ಲಾರಿ

ABOUT THE AUTHOR

...view details