ಕರ್ನಾಟಕ

karnataka

ETV Bharat / city

'ವರದಕ್ಷಿಣೆಗಾಗಿ ಪೀಡಿಸಿ ಮಗಳ ಕೊಲೆ': ಧರ್ಮಸ್ಥಳ ಪೊಲೀಸರಿಗೆ ಪೋಷಕರ ದೂರು - Murder case

ಅಳಿಯ ನಮ್ಮ ಮಗಳನ್ನು ವರದಕ್ಷಿಣೆಗಾಗಿ ಪೀಡಿಸಿ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಕುತ್ತಿಗೆಗೆ ಬಟ್ಟೆ ಕಟ್ಟಿ ನೇತಾಡಿಸಿದ್ದಾನೆ. ಈ ಬಗ್ಗೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

Murder of lady for dowry
ಬೆಳ್ತಂಗಡಿ ರಶ್ಮಿತಾ ಕೊಲೆ ಪ್ರಕರಣ

By

Published : Oct 19, 2021, 9:00 AM IST

ಬೆಳ್ತಂಗಡಿ: ವರದಕ್ಷಿಣೆಗಾಗಿ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಮೃತ ಮಹಿಳೆಯ ತಂದೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪುತ್ಯೆಮನೆ ರಾಜೇಶ್ ಎಂಬುವವರ ಪತ್ನಿ ರಶ್ಮಿತಾ (28)ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಪೋಷಕರು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆಗೈಯಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ರಶ್ಮಿತಾ-ರಾಜೇಶ್​ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗು ಇದೆ. ಕಳೆದ ಕೆಲವು ದಿನಗಳಿಂದ ಪತಿ ರಾಜೇಶ್, ತನಗೆ ವರದಕ್ಷಿಣೆ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ತಂದೆಯಲ್ಲಿ ಮಗಳು ತಿಳಿಸಿದ್ದರು. ಈ ಸಂಬಂಧ ತಂದೆ ಮಗಳಿಗೆ ಸಮಾಧಾನಪಡಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಗುಬ್ಬಿ ಬಸ್ ನಿಲ್ದಾಣದಿಂದಲೇ ಕೆಎಸ್‌ಆರ್‌ಟಿಸಿ ಬಸ್ ಕದ್ದ ಕಳ್ಳರು!

ಅದರೆ ಅ.18ರ ಮಧ್ಯಾಹ್ನ ಮಗಳ ಸಾವಿನ ಸುದ್ದಿ ಮನೆಯವರಿಗೆ ತಿಳಿದಿದೆ. ಅವರು ಬಂದು ನೋಡಿದಾಗ ಮೃತ ದೇಹವನ್ನು ಮಂಚದಲ್ಲಿ ಮಲಗಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಳಿಯ ರಾಜೇಶ್ ಮಗಳನ್ನು ವರದಕ್ಷಿಣೆಗಾಗಿ ಪೀಡಿಸಿ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಕುತ್ತಿಗೆಗೆ ಬಟ್ಟೆ ಕಟ್ಟಿ ನೇತಾಡಿಸಿದ್ದಾನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತರ ತಂದೆ ಪೊಲೀಸರನ್ನು ಆಗ್ರಹಿಸಿದ್ದಾರೆ.

ABOUT THE AUTHOR

...view details