ಮಂಗಳೂರು:ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್ -MRPL)ನ ಸಿಂಗಲ್ ಪಾಯಿಂಟ್ ಮೂರಿಂಗ್ (SPM -Single Point Mooring) ನಿಲ್ದಾಣದ ಮೂಲಕ ನವಮಂಗಳೂರು ಬಂದರಿನಲ್ಲಿ 500ನೇ ಸರಕು ಸಾಗಾಟದ ಹಡಗನ್ನು ಯಶಸ್ವಿಯಾಗಿ ಇಳಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಕಚ್ಚಾ ತೈಲ ಸಾಗಿಸುವ ಹಡಗು (Crude Oil vessel) ಇದಾಗಿದ್ದು. ಎಂಆರ್ಪಿಎಲ್ ನ ಈ ಕಾರ್ಯದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಆದಾಯ ಗಳಿಸುವ ಮೂಲಕ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ ಮಾಡಿದಂತಾಗಿದೆ.
ಸೋಮವಾರ 1.35 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಸೌದಿ ಅರೇಬಿಯಾದಿಂದ ಆಗಮಿಸಿದ ಹಡಗಿನಿಂದ ಯುರೋಗ್ಲೋರಿ ಅನ್ನು ಇಳಿಸಲಾಗಿದೆ. ಎಂಆರ್ಪಿಎಲ್ನ ಎಸ್ಪಿಎಂ ಅನ್ನು ಆಗಸ್ಟ್ 2013 ರಲ್ಲಿ ಉದ್ಘಾಟಿಸಲಾಗಿತ್ತು. ಅಂದಿನಿಂದ ಎಂಆರ್ಪಿಎಲ್ ತಂಡವು 3 ವಿಭಿನ್ನ ವಿಭಾಗಗಳಲ್ಲಿ 500 ಹಡಗುಗಳ ಮೂಲಕ 75.5 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಯಶಸ್ವಿಯಾಗಿ ಇಳಿಸಿ ನಿರ್ವಹಣೆ ಮಾಡಿದೆ.