ಮಂಗಳೂರು :ಎಂಆರ್ಪಿಎಲ್ನಲ್ಲಿ ಕರ್ತವ್ಯದಲ್ಲಿರುವಾಗಲೇ ಕೌಂಟರ್ ವೇಟ್ ಬಡಿದು ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್ ಎಂಬುವರು ಸಾವನ್ನಪ್ಪಿರುವ ಪ್ರಕರಣ ಎರಡು ದಿನಗಳ ಹಿಂದೆ ನಡೆದಿದೆ. ಈತನ ಕುಟುಂಬಕ್ಕೆ ಎಂಆರ್ಪಿಎಲ್ ಸಂಸ್ಥೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಎಂಆರ್ಪಿಎಲ್ನಲ್ಲಿ ಕರ್ತವ್ಯದಲ್ಲಿರುವಾಗಲೇ ಕೇಶವ ಕೋಟ್ಯಾನ್ ಮೃತಪಟ್ಟಿದ್ದು, ಸಾವಿನ ನೈಜ ಕಾರಣವನ್ನು ಕಂಪನಿ ಮುಚ್ಚಿಟ್ಟು ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದೆ. ಕೇಶವ ಕೋಟ್ಯಾನ್ 20ವರ್ಷದಿಂದ ಅಲ್ಲೇ 20 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದಾರೆ. ಕೇಶವ ಕೋಟ್ಯಾನ್ ಸಾವಿನ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ಎಂಆರ್ಪಿಎಲ್ ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿರುವುದು.. ಖಾಯಂ ನೌಕರ ಸಾವನ್ನಪ್ಪಿದರೆ ಎಂಆರ್ಪಿಎಲ್ ಸಂಸ್ಥೆ 2.25 ಕೋಟಿ ರೂ. ಕೊಡುತ್ತದೆ. ಆದರೆ, ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್‌ರಿಗೆ 25 ಲಕ್ಷ ರೂ. ಕೊಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಸಂಸ್ಥೆ ಕೇಶವ ಕೋಟ್ಯಾನ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರವನ್ನು ನೀಡಬೇಕು. ಜೊತೆಗೆ ಅವರ ಪುತ್ರನಿಗೆ ಖಾಯಂ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಪ್ರಕರಣದ ಹಿನ್ನೆಲೆ : ಜೂನ್ 22ರಂದು ಎಂಆರ್ಪಿಎಲ್ನಲ್ಲಿ ಕೇಶವ ಕೋಟ್ಯಾನ್ (47) ವರ್ಕ್ ಶಾಪ್ನಲ್ಲಿ ಕ್ರೇನ್ ಮೂಲಕ ಕೌಂಟರ್ ವೇಟ್ ಅನ್ನು ಅನ್‌ಲೋಡ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೌಂಟರ್ ವೇಟ್ ಬಡಿದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳು: ಹೌಹಾರಿದ ಬೆಳಗಾವಿ ಜನ!