ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ನಿರ್ಬಂಧ ಉಲ್ಲಂಘನೆಗೆ ಮಾಡಿದ 200ಕ್ಕೂ ಅಧಿಕ ಮಂದಿ ಸೇರಿದಂತೆ 90 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾತ್ರಿ ನಿರ್ಬಂಧ ಉಲ್ಲಂಘನೆ: 200ಕ್ಕೂ ಅಧಿಕ ಮಂದಿ, 90 ವಾಹನಗಳು ಪೊಲೀಸ್ ವಶಕ್ಕೆ - ಮಂಗಳೂರು ಕಮಿಷನರೇಟ್
ನಿರ್ಬಂಧ ಉಲ್ಲಂಘನೆಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಮಂದಿ ಹಾಗೂ 90ಕ್ಕೂ ಅಧಿಕ ವಾಹನಗಳನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೈಕ್ಗಳು ಪೊಲೀಸ್ ವಶಕ್ಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಸಂಜೆ ಆರು ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ಹೇರಲಾಗಿತ್ತು. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತದ ನಿರ್ಬಂಧಕಾಜ್ಞೆಯನ್ನು ಉಲ್ಲಂಘನೆ ಮಾಡಿ, ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದವರನ್ನು ತಪಾಸಣೆ ಮಾಡಿದ ಪೊಲೀಸರು 200ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಮೂರು ಕೊಲೆ ಅಪರಾಧಿಗಳು ಯಾವುದೇ ಸಂಘಟನೆ, ಸಿದ್ದಾಂತದವರಾಗಿದ್ದರೂ ಬಂಧಿಸುತ್ತೇವೆ:ಡಿಜಿಪಿ ಸ್ಪಷ್ಟನೆ