ಕರ್ನಾಟಕ

karnataka

ETV Bharat / city

ಸೀಲ್‌ಡೌನ್ ಪ್ರದೇಶಗಳಿಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆ ಪಡೀಲ್​ ಕಣ್ಣೂರು ವಾರ್ಡ್​​ನ ಹಲವಾರು ಪ್ರದೇಶಗಳನ್ನು ಸೀಲ್​ಡೌನ್​ ಮಾಡಲಾಗಿದೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಗ್ಯ ಇಲಾಖೆಯ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವಂತೆ ಜನರಿಗೆ ತಿಳಿಸಿದರು.

mla-vedavyasa-kamath-visits-seal-down-areas
ಶಾಸಕ ವೇದವ್ಯಾಸ ಕಾಮತ್

By

Published : May 2, 2020, 10:44 AM IST

ಮಂಗಳೂರು: ಕೋವಿಡ್​​-19 ಭೀತಿಯಿಂದ ಸೀಲ್​ ಡೌನ್​ ಆಗಿರುವ ಪಡೀಲ್​ ಕಣ್ಣೂರು ವಾರ್ಡ್‌ನ ಕೊಡಕಲ್​, ಶಕ್ತಿನಗರ ಹಾಗೂ ಬೋಳೂರು ಪ್ರದೇಶಕ್ಕೆ ಶಾಸಕ, ಡಿ. ವೇದವ್ಯಾಸ್​ ಕಾಮತ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೀಲ್ ಡೌನ್ ಪ್ರದೇಶಗಳಿಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ

ಎಲ್ಲಾ ಅಗತ್ಯ ವಸ್ತುಗಳನ್ನು ಮನೆ ಮನೆಗೂ ತಲುಪಿಸಲು ಆರೋಗ್ಯ ಇಲಾಖೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೂಪುರೇಷೆ ಸಿದ್ಧಪಡಿಸಿದೆ. ಇದಕ್ಕೆ ಜನರ ಸಹಕಾರ ಅವಶ್ಯಕ, ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಸ್ವಯಂ ರಕ್ಷಣಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಚತೆ ಹಾಗೂ ಮನೆಯೊಳಗೆ ಇರುವಂತಹ ಕ್ರಮಗಳನ್ನು ಶಿಸ್ತಿನಿಂದ ಪಾಲಿಸಬೇಕು ಎಂದು ಶಾಸಕ ವೇದವ್ಯಾಸ್​ ಕಾಮತ್​ ಜನರಲ್ಲಿ ಮನವಿ ಮಾಡಿದರು.

ಈಗಾಗಲೇ ಒಂದು ಹಂತದಲ್ಲಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದಾಗ ಮತ್ತಷ್ಟು ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುವುದು. ಅಲ್ಲದೆ ಮನೆ ಮನೆಗೆ ಆಶಾಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಬಂದಲ್ಲಿ ಅವರೊಂದಿಗೆ ಸಹಕರಿಸಿ ಎಂದು ವಿನಂತಿಸಿಕೊಂಡರು.

ABOUT THE AUTHOR

...view details