ಕರ್ನಾಟಕ

karnataka

By

Published : Aug 10, 2021, 11:04 PM IST

ETV Bharat / city

ಸಚಿವೆ ಕರಂದ್ಲಾಜೆ ಭೇಟಿ ಮಾಡಿದ ಶಾಸಕ ಮಠಂದೂರು; ಸೋಲಾರ್ ಪಂಪ್‌ಸೆಟ್‌ಗಳ ಸಬ್ಸಿಡಿಗೆ ಮನವಿ

ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು, ಉತ್ತರ ಕನ್ನಡ ಜಿಲ್ಲೆ ಮಾದರಿಯಲ್ಲೇ ಸೋಲಾರ್ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಮಾಡಿದ್ದಾರೆ.

Mla sanjeeva matandoor meet central minister shobha karandlaje in delhi
ದೆಹಲಿಯಲ್ಲಿ ಸಚಿವೆ ಕರಂದ್ಲಾಜೆ ಭೇಟಿ ಮಾಡಿದ ಶಾಸಕ ಮಠಂದೂರು; ಸೋಲಾರ್ ಪಂಪ್‌ಸೆಟ್‌ಗಳ ಸಬ್ಸಿಡಿಗೆ ಮನವಿ

ಪುತ್ತೂರು(ದಕ್ಷಿಣ ಕನ್ನಡ): ಶಾಸಕ ಸಂಜೀವ ಮಠಂದೂರು ಅವರು ದೆಹಲಿಯಲ್ಲಿಂದು ಕೇಂದ್ರದ ಕೃಷಿ ರಾಜ್ಯ ಖಾತೆ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಯ ಮಾದರಿಯಲ್ಲೇ ಸೋಲಾರ್ ಪಂಪ್ ಸೆಟ್‌ಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಸಚಿವೆ ಕರಂದ್ಲಾಜೆ ಭೇಟಿ ಮಾಡಿದ ಶಾಸಕ ಮಠಂದೂರು; ಸೋಲಾರ್ ಪಂಪ್‌ಸೆಟ್‌ಗಳ ಸಬ್ಸಿಡಿಗೆ ಮನವಿ

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವಾಗ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಆ ಸಬ್ಸಿಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೂ ವಿಸ್ತರಿಸಬೇಕು. ಪುತ್ತೂರು ಎಪಿಎಂಸಿ ಅಂಡರ್ ಪಾಸ್ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಇದಕ್ಕೆ ಕೇಂದ್ರದಿಂದಲೂ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪುತ್ತೂರಿನಲ್ಲಿ ಸರ್ಕಾರದ ಹಂತದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ನಿಯೋಗದಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ನಿರ್ದೇಶಕ ಬಾಲಕೃಷ್ಣ ಬಾಣಜಾಲು, ಸುಳ್ಯ ಗ್ರಾ.ಪಂ ಸದಸ್ಯ ಹರೀಶ್ ಉಬರಡ್ಕ, ವಸಂತ ವೀರಮಂಗಲ, ಜೀವನ್ ಉಪಸ್ಥಿತರಿದ್ದರು.

ABOUT THE AUTHOR

...view details