ಬೆಳ್ತಂಗಡಿ(ದಕ್ಷಿಣಕನ್ನಡ) :ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳುವವರಿಗೆ ಶಾಸಕ ಹರೀಶ್ ಪೂಂಜ ನೆರವಾಗಿದ್ದಾರೆ.
ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಶಾಸಕ ಹರೀಶ್ ಪೂಂಜ.. - lackdown effect
ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲಿ ಹಲವೆಡೆ ಉದ್ಯೋಗ ಮಾಡುತ್ತಿದ್ದವರು ಊರಿಗೆ ಬಂದಿದ್ದರು. ಆದರೆ, ಇದೀಗ ಬೆಂಗಳೂರಿನ ಕೆಲವು ಕಂಪನಿಗಳಲ್ಲಿ ವಾಪಸ್ ಕೆಲಸಕ್ಕೆ ಬರುವಂತೆ ತಿಳಿಸಿದ್ದರು. ಬೆಂಗಳೂರಿಗೆ ತೆರಳಲು ವ್ಯವಸ್ಥೆಯಿಲ್ಲದ ಪರದಾಟ ನಡೆಸುವಂತಾಗಿತ್ತು..
ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲಿ ಹಲವೆಡೆ ಉದ್ಯೋಗ ಮಾಡುತ್ತಿದ್ದವರು ಊರಿಗೆ ಬಂದಿದ್ದರು. ಆದರೆ, ಇದೀಗ ಬೆಂಗಳೂರಿನ ಕೆಲವು ಕಂಪನಿಗಳಲ್ಲಿ ವಾಪಸ್ ಕೆಲಸಕ್ಕೆ ಬರುವಂತೆ ತಿಳಿಸಿದ್ದು, ಇವರಿಗೆ ಬೆಂಗಳೂರಿಗೆ ಹೋಗಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಈ ವಿಚಾರವನ್ನು ಕೆಲವರು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದಾಗ, ತಕ್ಷಣ ಸ್ಪಂದಿಸಿದ ಅವರು,ಲಾಕ್ಡೌನ್ ನಿಯಮಕ್ಕೆ ಲೋಪವಾಗದಂತೆ ಸರಿಯಾದ ರೀತಿ ಕ್ರಮಜರುಗಿಸಿ, ತಲಾ ಒಂದು ಬಸ್ನಲ್ಲಿ 20 ಜನರಂತೆ ಸುಮಾರು 200 ಜನರನ್ನ 10 ಬಸ್ಗಳಲ್ಲಿ ಉಚಿತವಾಗಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.
ಅಲ್ಲದೆ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಮಾಸ್ಕ್, ಆಹಾರದ ವ್ಯವಸ್ಥೆ, ನೀರಿನ ವ್ಯವಸ್ಥೆಯನ್ನೂ ಮಾಡಿ ಕಳುಹಿಸಿದ್ದಾರೆ.