ಮಂಗಳೂರು: ಕೋವಿಡ್-19 ಸೋಂಕು ತಗುಲಿದ್ದ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಗುಣಮುಖರಾಗಿದ್ದು, ಮತ್ತೆ ಸಾರ್ವಜನಿಕ ಸೇವೆ ಆರಂಭಿಸಿದ್ದಾರೆ.
ಕೊರೊನಾದಿಂದ ಗುಣಮುಖ: ಮತ್ತೆ ಸಾರ್ವಜನಿಕ ಸೇವೆ ಆರಂಭಿಸಿದ ಶಾಸಕ ಡಾ. ಭರತ್ ಶೆಟ್ಟಿ - Mangalore News
ಕೋವಿಡ್-19 ಸೋಂಕು ತಗುಲಿದ್ದ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಗುಣಮುಖರಾಗಿದ್ದು, ಮತ್ತೆ ಸಾರ್ವಜನಿಕ ಸೇವೆ ಆರಂಭಿಸಿದ್ದಾರೆ.
![ಕೊರೊನಾದಿಂದ ಗುಣಮುಖ: ಮತ್ತೆ ಸಾರ್ವಜನಿಕ ಸೇವೆ ಆರಂಭಿಸಿದ ಶಾಸಕ ಡಾ. ಭರತ್ ಶೆಟ್ಟಿ MLA Dr.Y Bharat Shetty Healing from Corona](https://etvbharatimages.akamaized.net/etvbharat/prod-images/768-512-8197048-350-8197048-1595868189482.jpg)
ಕೊರೊನಾದಿಂದ ಗುಣಮುಖ: ಮತ್ತೆ ಸಾರ್ವಜನಿಕ ಸೇವೆ ಆರಂಭಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಕಚೇರಿಗೆ ಸೋಮವಾರ ಸಂಜೆ ಆಗಮಿಸಿದ ಅವರು, ಸಾರ್ವಜನಿಕರನ್ನು ಭೇಟಿಯಾದರು. ಬಳಿಕ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಜುಲೈ 2ರಂದು ತನಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದರು. ಅಲ್ಲದೆ, ಜುಲೈ 12 ರಂದು ಮತ್ತೆ ಟ್ವೀಟ್ ಮಾಡಿ ತಾನು ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಿಯಮದಂತೆ ಕ್ವಾರಂಟೈನ್ಗೆ ಒಳಗಾಗುತ್ತಿದ್ದೇನೆ ಎಂದು ಹೇಳಿದ್ದರು.
ಇದೀಗ ಗುಣಮುಖರಾಗಿ ಮತ್ತೆ ಸಾರ್ವಜನಿಕ ಸೇವೆ ಆರಂಭಿಸಿದ್ದಾರೆ.