ಕರ್ನಾಟಕ

karnataka

ETV Bharat / city

ಸಸಿ ನೆಟ್ಟು ಪೋಷಿಸಿದರೆ ಲಕ್ಷಾಂತರ ರೂ. ಬಹುಮಾನ..!

ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೆ, ಇದರ ಪ್ರಯೋಜನ ಪ್ರಕೃತಿಗೆ ಆಗಬೇಕೆನ್ನುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರತಿ ಬೂತ್ ನಲ್ಲಿ ಕನಿಷ್ಠ ಐದು ಗಿಡಗಳನ್ನು ನೆಟ್ಟು ಬೆಳೆಸುವ ಗುರಿಯನ್ನು ಶಾಸಕ ಡಾ. ಭರತ್ ಶೆಟ್ಟಿ ನಿಗದಿಪಡಿಸಿದ್ದಾರೆ. ಅದರಂತೆ ಉತ್ತಮ ಫಲಿತಾಂಶ ಸಿಗುವ ಬೂತ್ ಗೆ ಬಹುಮಾನ ಧನವನ್ನು ಸಹ ನೀಡಲಾಗುತ್ತದೆ.

MLA Dr. Bharat shetty
MLA Dr. Bharat shetty

By

Published : Jul 30, 2020, 6:52 PM IST

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಕನಿಷ್ಠ ಐದು ಸಸಿ ನೆಟ್ಟು ಬೆಳೆಸುವ ಪಕ್ಷದ ಬೂತ್​ ಮಟ್ಟದ ಸಂಘಟನೆಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಒಟ್ಟು 17 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೆ, ಇದರ ಪ್ರಯೋಜನ ಪ್ರಕೃತಿಗೆ ಆಗಬೇಕೆನ್ನುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರತಿ ಬೂತ್ ನಲ್ಲಿ ಕನಿಷ್ಠ ಐದು ಗಿಡಗಳನ್ನು ನೆಟ್ಟು ಬೆಳೆಸುವ ಗುರಿಯನ್ನು ಶಾಸಕರು ನಿಗದಿಪಡಿಸಿದ್ದಾರೆ. ತಮ್ಮ ಗುರಿಯನ್ವಯ ಪ್ರತಿ ಬೂತ್ ನಲ್ಲಿ ನೆಟ್ಟ ಗಿಡಗಳನ್ನು ವಾರ್ಷಿಕವಾಗಿ ಮೌಲ್ಯಮಾಪನ ಮಾಡಿ ಗಿಡಗಳನ್ನು ಅತ್ಯುತ್ತಮವಾಗಿ ಪೋಷಣೆ ಮಾಡಿದ ಬೂತ್​ಗೆ ಪ್ರಥಮ ಬಹುಮಾನ 10 ಲಕ್ಷ ರೂ, 2 ನೇ ಸ್ಥಾನ ಪಡೆಯುವ ಬೂತ್​ಗೆ 5 ಲಕ್ಷ ರೂ ಮತ್ತು 3ನೇ ಸ್ಥಾನ ಪಡೆಯುವ ಬೂತ್​ಗೆ 2 ಲಕ್ಷ ರೂ. ಬಹುಮಾನ ಧನವನ್ನು ಶಾಸಕರ ನಿಧಿಯಿಂದ ಹೆಚ್ಚುವರಿಯಾಗಿ ಆ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.

ಈ ಬಹುಮಾನದ ಹಣವನ್ನು ಆಯಾ ಬೂತ್ ನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಅವಕಾಶ ಕಲ್ಪಿಸಲಾಗುವುದು. ಈ ಮೂಲಕ ಪ್ರತಿ ಬೂತ್​ನಲ್ಲಿ ಹಸರೀಕರಣ ಯೋಜನೆ ಪ್ರಯೋಜನಕಾರಿಯಾಗಿ ಅನುಷ್ಠಾನಕ್ಕೆ ಬರಲಿದೆ ಎಂಬುದು ಶಾಸಕರ ವಿಶ್ವಾಸವಾಗಿದೆ.

ABOUT THE AUTHOR

...view details