ETV Bharat Karnataka

ಕರ್ನಾಟಕ

karnataka

ETV Bharat / city

ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನ ಕೊಡಲು ಮುಂದಾದ ಶಾಸಕ ಭರತ್ ಶೆಟ್ಟಿ - mla bharat shetty on harsha murder case

ಶಿವಮೊಗ್ಗದಲ್ಲಿ ಕೊಲೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ.

MLA Bharat shetty
ಶಾಸಕ ಭರತ್ ಶೆಟ್ಟಿ
author img

By

Published : Feb 22, 2022, 11:09 AM IST

ಮಂಗಳೂರು(ದಕ್ಷಿನ ಕನ್ನಡ):ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರು ಟ್ವೀಟ್ ಮಾಡಿ, ಮೃತ ಹರ್ಷನ ಮನೆಯವರ ಜೊತೆ ನಿಲ್ಲೋಣ. ನೊಂದ ಕುಟುಂಬಕ್ಕೆ ಆಸರೆಯಾಗೋಣ‌ ಎಂದು ಹೇಳಿದ್ದರು.

ಇದನ್ನೂ ಓದಿ:'ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳೆಂದು ಹೇಳಿದ್ದೆ, ಈಗಲಾದ್ರೂ ಹರಿಪ್ರಸಾದ್ ಒಪ್ಕೋತಾರಾ?'

ಈ ಟ್ವೀಟ್​ ರೀಟ್ವೀಟ್ ಮಾಡಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ನಾವು ಕಾರ್ಯಕರ್ತನನ್ನು ಕಳೆದುಕೊಂಡಿದ್ದು, ಆತನ ಕುಟುಂಬದ ಜೊತೆಗೆ ‌ನಿಲ್ಲಬೇಕು‌. ನಾನು ಒಂದು ತಿಂಗಳ ವೇತನ ಮತ್ತು ಅಲೋವೆನ್ಸ್ ಅನ್ನು ಆತನ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details