ಕರ್ನಾಟಕ

karnataka

ETV Bharat / city

ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದ.ಕ.ಜಿಲ್ಲಾ ವ್ಯವಸ್ಥಾಪಕ ಅರೆಸ್ಟ್​ - sexual harassment

ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ‌ ಮುಹಮ್ಮದ್ ಫಾರೂಕ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಮುಹಮ್ಮದ್ ಫಾರೂಕ್
ಮುಹಮ್ಮದ್ ಫಾರೂಕ್

By

Published : Oct 14, 2021, 1:34 PM IST

ಮಂಗಳೂರು: ಕಚೇರಿಯ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ‌ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ‌ನನ್ನು ನಗರದ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದ.ಕ. ಜಿಲ್ಲಾ ವ್ಯವಸ್ಥಾಪಕ‌ ಮುಹಮ್ಮದ್ ಫಾರೂಕ್ (47) ಬಂಧಿತ ಆರೋಪಿ. ಈತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಗೆ ಲೈಂಗಿಕ ‌ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.

ಯುವತಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಆಕೆ ನೀಡಿರುವ ದೂರಿನ ಅನ್ವಯ ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details