ಕರ್ನಾಟಕ

karnataka

ETV Bharat / city

ಬಾಲಕಿಯನ್ನು ಲಾಡ್ಜ್​​ಗೆ ಕರೆದ್ಯೊಯ್ದು ಅತ್ಯಾಚಾರ ಆರೋಪ: ಪ್ರಕರಣ ದಾಖಲು - ಉಪ್ಪಿನಂಗಡಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ

ನೆರೆಮನೆಯ ಬಾಲಕಿಯನ್ನು ಲಾಡ್ಜ್​​​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ನಡೆದಿದೆ.

Minor girl raped in lodge near Dakshina kannada
ಸಾಂದರ್ಭಿಕ ಚಿತ್ರ

By

Published : Jun 8, 2022, 6:47 AM IST

ಉಪ್ಪಿನಂಗಡಿ(ದಕ್ಷಿಣ ಕನ್ನಡ): ಬಾಲಕಿಯನ್ನು ಯುವಕನೊಬ್ಬ ಬಲವಂತವಾಗಿ ಲಾಡ್ಜ್​​​ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈತ ಬಾಲಕಿಯ ನೆರೆಮನೆಯವನಾಗಿದ್ದು, ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಮೇ.30 ರಂದು ಬಾಲಕಿ ಮನೆಯಿಂದ ಶಾಲೆಗೆ‌ ಹೋಗುವಾಗ ಮುನಾಸೀರ್ ಕಾರಿನಲ್ಲಿ ಶಾಲೆಗೆ ಬಿಡುತ್ತೇನೆ ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೆ ಉಪ್ಪಿನಂಗಡಿಯ ಲಾಡ್ಜ್​​​ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾ‌ನೆ‌.‌ ಇದಲ್ಲದೇ, ಸೋಮವಾರ(ಜೂ.6) ಕೂಡ ಬೆಳಗ್ಗೆ ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ

ಅಲ್ಲದೇ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ‌ ಲಾಡ್ಜ್ ನಿಂದ ಕರೆದುಕೊಂಡು ಬಂದು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾನೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಾಲಕಿ ದೂರು ನೀಡಿದ್ದಾಳೆ.

ಇದನ್ನೂ ಓದಿ:ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ

ABOUT THE AUTHOR

...view details