ಸುಳ್ಯ: ಇತ್ತೀಚೆಗೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಕಾರ್ಯ ಅಲ್ಲಲ್ಲಿ ಕಾಣ ಸಿಗುತ್ತಿವೆ. ಸವಣೂರಿನ ಚಂದ್ರನಾಥ ಬಸದಿಯ ಸಮೀಪ ಹಡಿಲು ಗದ್ದೆಗಿಳಿದು ಸಚಿವ ಎಸ್.ಅಂಗಾರ ಭತ್ತ ನಾಟಿ ಮಾಡಿದರು.
ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡಿಲು (ಪಾಳು) ಬಿದ್ದಿತ್ತು. ಸವಣೂರಿನ ಸಮಾನ ಮನಸ್ಕ ಯುವಕರ ತಂಡ 'ಅಂಬಾ ಬ್ರದರ್ಸ್' ಈ ಗದ್ದೆಯಲ್ಲಿ ಬೇಸಾಯ ಮಾಡುವ ಯೋಜನೆ ರೂಪಿಸಿತು. ಅದರಂತೆ ‘ಗದ್ದೆಗಿಳಿಯೋಣ ಬಾ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಳ್ಯ ಶಾಸಕ ಮತ್ತು ಸಚಿವ ಎಸ್.ಅಂಗಾರ ಭತ್ತ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.