ಕರ್ನಾಟಕ

karnataka

ETV Bharat / city

ಅಹೋರಾತ್ರಿ ಧರಣಿ ಸಿದ್ದರಾಮಯ್ಯ- ಡಿಕೆಶಿ ನಡುವಿನ ಫೈಟ್ ಅಷ್ಟೇ: ಸಚಿವ ಅಶೋಕ್

ಹಿಜಾಬ್ ಪರವಾಗಿ ನಾವಿದ್ದೇವೆಂದು ಹೇಳಲು ಡಿಕೆಶಿ ಬಿಡುತ್ತಿಲ್ಲ. ಹಿಂದೂ ಪರ ಇದ್ದೇವೆ ಅನ್ನಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಹಾಗಾಗಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಇದು ಸಿದ್ದರಾಮಯ್ಯ - ಡಿಕೆಶಿ ನಡುವಿನ ಫೈಟ್ ಅಷ್ಟೇ ಎಂದು ಆರ್. ಅಶೋಕ್ ಹೇಳಿದರು.

minister r ashok
ಸಚಿವ ಆರ್ ಅಶೋಕ್

By

Published : Feb 19, 2022, 12:48 PM IST

ಮಂಗಳೂರು(ದಕ್ಷಿಣ ಕನ್ನಡ):ಕಾಂಗ್ರೆಸ್​ನವರದ್ದು ಮನೆಗೆ ಮಗನಾಗಲಿಲ್ಲ, ಸ್ಮಶಾನಕ್ಕೆ ಹೆಣವಾಗಲಿಲ್ಲ ಎಂಬಂತಹ ಸ್ಥಿತಿಯಾಗಿದೆ. ಹಿಜಾಬ್ ಪರವಾಗಿ ನಾವಿದ್ದೇವೆಂದು ಹೇಳಲು ಡಿಕೆಶಿ ಬಿಡುತ್ತಿಲ್ಲ. ಹಿಂದೂ ಪರ ಇದ್ದೇವೆ ಅನ್ನಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಹಾಗಾಗಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಇದು ಸಿದ್ದರಾಮಯ್ಯ - ಡಿಕೆಶಿ ನಡುವಿನ ಫೈಟ್ ಅಷ್ಟೇ ಎಂದು ಮಂಗಳೂರಿನಲ್ಲಿಂದು ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.

ವಿಧಾನಸಭೆಯಲ್ಲಿ‌ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರವಾಗಿ ಮಾತನಾಡಿದ ಅವರು, ಹಿಜಾಬ್ ಕುರಿತು ಚರ್ಚೆಯಾಗಬೇಕಿತ್ತು. ಕಾಂಗ್ರೆಸ್​ನವರು ಚರ್ಚೆ ಮಾಡಬೇಕಿತ್ತಲ್ವಾ?. ವಿಧಾನಸಭೆ ಅಧಿವೇಶನ ಜನರ ಸಮಸ್ಯೆ ಪರಿಹಾರಕ್ಕೆ ನಡೆಯೋದು. ಕೋಟ್ಯಂತರ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕು, ಅವರು ಶಿಕ್ಷಣ ಪಡೆಯಬೇಕು ಎಂಬ ಕಾಳಜಿ ಕಾಂಗ್ರೆಸ್​​ನವರಿಗೆ ಇಲ್ಲ ಎಂದರು.

ಕಾಂಗ್ರೆಸ್​ ಅಹೋರಾತ್ರಿ ಧರಣಿ ಕುರಿತು ಸಚಿವ ಆರ್ ಅಶೋಕ್ ಪ್ರತಿಕ್ರಿಯೆ

ಈ ಬಗ್ಗೆ ಕಾಂಗ್ರೆಸ್​ನವರಿಗೆ ಕಾಳಜಿ ಇದ್ದಲ್ಲಿ ಅವರು ಹಿಜಾಬ್, ಕೇಸರಿ ಶಾಲು ಬಗ್ಗೆ ಚರ್ಚೆ ಎತ್ತಬೇಕಿತ್ತು. ಆದರೆ, ಈ ಬಗ್ಗೆ ಚರ್ಚೆ ಮಾಡಿದರೆ ಮತ ಹೋಗುತ್ತದೆ ಎಂಬ ಭೀತಿಯಲ್ಲಿ ಅವರು ಚರ್ಚೆಗೆ ಮುಂದಾಗುತ್ತಿಲ್ಲ. ವೋಟು ಕಳೆದುಕೊಳ್ಳುವ ಕೆಲಸ ಮಾಡಬಾರದು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ.

ಅದಕ್ಕೆ ಕಾಂಗ್ರೆಸ್​ನವರು ಈಶ್ವರಪ್ಪನವರನ್ನು ಹಿಡಿದುಕೊಂಡಿದ್ದಾರೆ‌. ಈ ಧರಣಿಯಲ್ಲಿ ಬಡವರ ಪ್ರಶ್ನೆ ಏನು ಬಂತು. ಬರೀ ಸ್ವಾರ್ಥವಿದೆಯಷ್ಟೇ. ಈಶ್ವರಪ್ಪ - ಡಿಕೆಶಿ - ಸಿದ್ದರಾಮಯ್ಯ ಬಿಟ್ಟು ಬೇರೇನೂ ಇಲ್ಲ. ಈ ಮೂವರಿಗೋಸ್ಕರ ಕಲಾಪ ನಿಲ್ಲುತ್ತಿದೆ ಎಂದರು.

ಸದನಕ್ಕೆ ದಿನಕ್ಕೆ ಒಂದು ಕೋಟಿ ರೂ. ಖರ್ಚು ಬೀಳುತ್ತದೆ.‌ ಜನರ ದುಡ್ಡು ತೆಗೆದುಕೊಂಡು ಸದನದಲ್ಲಿ ಆರಾಮದಲ್ಲಿ ನಿದ್ದೆ ಹೊಡೆದರೆ ಏನು ಅರ್ಥ‌. ಇದು ಜನರಿಗೆ ಮೋಸ ಮಾಡಿದಂತೆ ಅಲ್ಲವೇ. ಜನರ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸದೇ ತೋಳು ಏರಿಸೋದು, ಬಡಿದಾಡೋದು ಮಾಡಿದರೆ ಏನು ಬಂತು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ಬಡವರಿಗೋಸ್ಕರ ಕಟ್ಟಿಸಿರೋದು ಹೊರತು ಕುಸ್ತಿ ಆಡೋಕ್ಕಲ್ಲ. ಹಾಗಾಗಿ ಹಿಜಾಬ್ ಬಗ್ಗೆ, ಕೇಸರಿ ಶಾಲು ಬಗ್ಗೆ ಕಾಂಗ್ರೆಸ್​ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದರು.

ಇದನ್ನೂ ಓದಿ:3ನೇ ದಿನಕ್ಕೆ ಕಾಲಿಟ್ಟ ಕೈ ನಾಯಕರ ಅಹೋರಾತ್ರಿ ಧರಣಿ: ಮೇಕೆದಾಟು ಪಾದಯಾತ್ರೆ ಕುರಿತು ಡಿಕೆಶಿ ಹೇಳಿದ್ದೇನು?

ವಿದ್ಯಾರ್ಥಿಗಳು ಮತ್ತೆ ಶಾಲಾ ಕಾಲೇಜುಗಳಿಗೆ ಹೋಗಬೇಕು. ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೇ ಹೊರತು ಮತ ಪ್ರಚಾರಕ್ಕಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಲಿ‌. ಉತ್ತಮ ವ್ಯವಸ್ಥೆಯನ್ನು ಕೊಡುವ ವೇದಿಕೆ ವಿಧಾನಸಭೆ. ಅಂತಹ ವಿಧಾನಸಭೆಗೆ ಅಗೌರವವನ್ನು ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಜನರು ಈಗಾಗಲೇ ಕಾಂಗ್ರೆಸ್ ನವರನ್ನು ದೇಶದಿಂದ ಓಡಿಸಿದ್ದಾರೆ, ಮುಂದಿನ ದಿನಗಳಲ್ಲಿ ರಾಜ್ಯದಿಂದಲೂ ಓಡಿಸುತ್ತಾರೆ ಎಂದು ಹೇಳಿದರು.

ABOUT THE AUTHOR

...view details