ಕರ್ನಾಟಕ

karnataka

ETV Bharat / city

ಸಚಿವರ ಮಾತಿಗೂ ಕ್ಯಾರೇ ಇಲ್ಲ... ನನಗೆ ಕಾನೂನೇ ಮುಖ್ಯ ಎಂದ ಪಿಡಿಒ! - ಮಂಗಳೂರು ಲೇಟೆಸ್ಟ್​ ನ್ಯೂಸ್​

ಕೊರೊನಾ ಸೋಂಕಿತರಿಗೆ ದಿನಸಿ ಕಿಟ್ ವಿತರಣೆ ಬಗ್ಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಂದಾವರ ಪಿಡಿಒ ಯಶವಂತ ಎಂಬುವವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ.

Mangalore
ಸಚಿವ ಕೋಟ ಶ್ರೀನಿವಾಸ ಪೂಜಾರಿ

By

Published : May 26, 2021, 10:23 AM IST

ಮಂಗಳೂರು:ಪಾಸಿಟಿವ್ ಬಂದು ಹೋಮ್ ಐಸೋಲೇಷನ್​ನಲ್ಲಿರುವ ಕೊರೊನಾ ಸೋಂಕಿತರಿಗೆ ದಿನಸಿ ಕಿಟ್ ವಿತರಣೆ ಬಗ್ಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಂದಾವರ ಪಿಡಿಒ ಯಶವಂತ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಈ ಬಗ್ಗೆ ಸಚಿವರ ಮಾತಿಗೂ ತಲೆಬಾಗದೆ ಕಾನೂನೇ ಮುಖ್ಯ ಎಂದು ಪಿಡಿಒ ಹೇಳಿದ್ದಾರೆ. ಈ ಆಡಿಯೋ ವೈರಲ್ ಆಗಿದೆ.

ಸಚಿವರ ಮಾತಿಗೂ ಕ್ಯಾರೇ ಇಲ್ಲ... ನನಗೆ ಕಾನೂನೇ ಮುಖ್ಯ ಎಂದ ಪಿಡಿಒ

ಕೋಟಾ ಶ್ರೀನಿವಾಸ ಪೂಜಾರಿ ಕಂದಾವರ ಪಿಡಿಒ ಯಶವಂತಗೆ ದೂರವಾಣಿ ಕರೆ ಮಾಡಿ 'ತಮ್ಮಲ್ಲಿ ಪಾಸಿಟಿವ್ ಬಂದು ಮನೆಯಲ್ಲಿರುವ ಕೊರೊನಾ ಸೋಂಕಿತರಿಗೆ ದಿನಸಿ ಕಿಟ್ ಇದೆಯಾ ಎಂದು ಕೇಳಿದ್ದಾರೆ. ಇದೆ ಎಂದ ಪಿಡಿಒಗೆ ಮತ್ತೆ ಸಚಿವರು, ಹಣ ಇಲ್ಲ ಎಂದು ಹೇಳುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಹೇಳಿದ್ದಾರೆ. ಅದಕ್ಕೆ ಪಿಡಿಒ ಯಶವಂತ್, ಹಣ ಇದೆ. ಆದರೆ, ಅದಕ್ಕೆ ಕೊಟೇಷನ್ ಕರಿಬೇಕು. ಎಷ್ಟು ಕಿಟ್​ಗಳ ಅಗತ್ಯತೆ ಇದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ನಿಮಗೆ ಅದೇ ಗೊತ್ತಿಲ್ಲ ಅಂದರೆ ಹೇಗೆ? ನಿಮ್ಮ ಇಒ ಯಾರು ಅವರಲ್ಲಿ ಈ ಬಗ್ಗೆ ವಿಚಾರಿಸಿ. ಅಲ್ಲದೆ, ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೂರು ಕೊಟೇಷನ್​ಗಳನ್ನು ಪಡೆದುಕೊಂಡು ನಿಮ್ಮ ಅಕ್ಕಪಕ್ಕದ ಪಿಡಿಒಗಳು ಏನು ಮಾಡಿದ್ದಾರೋ, ಅದೇ ರೀತಿ ಮಾಡಿ ತಕ್ಷಣದಿಂದಲೇ ಕಿಟ್ ವಿತರಣೆ ಮಾಡಬೇಕು ಎಂದು ಹೇಳಿದ್ದಾರೆ.

ಕೆಜಿಡಿಪಿಯಿಂದ ವಿನಾಯಿತಿ ಬಂದಲ್ಲಿ ಎಷ್ಟು ಬೇಕಾದರೂ ಖರೀದಿ ಮಾಡಲು ಅವಕಾಶ ಇದೆ. ನಮಗೆ ಟೆಂಡರ್ ಮತ್ತು ಕೊಟೇಷನ್​ಗೆ ಮಾತ್ರ ಅವಕಾಶ ಇರುವುದು.‌ ನಾವು ಕೆಜಿಡಿಪಿಯನ್ನು ಉಲ್ಲಂಘನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅದಕ್ಕೆ ಸಚಿವರು, ನಿಮ್ಮ ಗ್ರಾಪಂ ಜಿಲ್ಲೆಯ ಒಳಗೆ, ಸರ್ಕಾರದ ಅಧೀನಕ್ಕೆ ಬರುತ್ತದಲ್ಲವೇ? ಆದ್ದರಿಂದ ನಿಮ್ಮ ಇಒ ಅಥವಾ ಬೇರೆ ಗ್ರಾಪಂನವರು ಏನು ಮಾಡುತ್ತಾರೋ ಅದೇ ರೀತಿ ಮಾಡಿ ಎಂದು ಹೇಳಿದ್ದಾರೆ.

ಬಳಿಕ ಸಚಿವರು 'ನೀವು ಈ ರೀತಿಯಲ್ಲಿ ಮಾತನಾಡಿದರೆ ಹೇಗೆ, ತಾವು ಯಾರಲ್ಲಿ ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ಅರಿವಿದೆಯೇ ಎಂದು ಕೇಳಿದ್ದಕ್ಕೆ ನಾನು ನಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದೇವೆ. ನಾವು ಕಾನೂನು ಪಾಲನೆ ಮಾಡಬೇಕಲ್ಲ ಎಂದು ಪಿಡಿಒ ಹೇಳಿದ್ದಾರೆ‌. ನಿಮ್ಮ ಸಮಸ್ಯೆ ಎಂದರೆ ಅದು ಸರ್ಕಾರದ ಸಮಸ್ಯೆಯೇ, ಸರ್ಕಾರ ಹೇಳಿದಂತೆ ಪಿಡಿಒ ಇರೋದಾ, ಪಿಡಿಒ ಹೇಳಿದಂತೆ ಸರ್ಕಾರ ಇರೋದಾ? ಎಂದು ಸಚಿವರು ಕೇಳಿದ್ದಾರೆ. ಆದರೂ ಪಿಡಿಒ, 'ನಾನು ಕಾನೂನು ಬಿಟ್ಟು ಹೊರ ಹೋಗಲು ಸಾಧ್ಯವಿಲ್ಲ' ಎಂದಿದ್ದಾರೆ. ಬಳಿಕ ಸಚಿವರು ಕಾನೂನನ್ನೇ ಅನುಸರಿಸಿ ಎಂದು ಫೋನ್ ಕಟ್ ಮಾಡಿದ್ದಾರೆ.

ಓದಿ:10 ಮಂದಿ ಸೋಂಕಿತ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿದ ಸಿಂಧನೂರು ತಾಲೂಕು ಆಸ್ಪತ್ರೆ ಸಿಬ್ಬಂದಿ

ABOUT THE AUTHOR

...view details