ಮಂಗಳೂರು: ಮೀನುಗಾರರ ಅನುಕೂಲಕ್ಕಾಗಿ ರಾಜ್ಯದಲ್ಲಿ ಕರ್ನಾಟಕ ಒಳನಾಡು ಮತ್ತು ಕಡಲು ಮೀನುಗಾರಿಕಾ ನಿಯಂತ್ರಣ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಒಳನಾಡು ಮತ್ತು ಕಡಲು ಮೀನುಗಾರಿಕಾ ನಿಯಂತ್ರಣ ನೀತಿ ರೂಪಿಸಲು ಸರ್ಕಾರ ಚಿಂತನೆ - ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪತ್ರಿಕಾಗೋಷ್ಠಿ
ಮೀನುಗಾರರ ಅನುಕೂಲಕ್ಕಾಗಿ ರಾಜ್ಯದಲ್ಲಿ ಕರ್ನಾಟಕ ಒಳನಾಡು ಮತ್ತು ಕಡಲು ಮೀನುಗಾರಿಕಾ ನಿಯಂತ್ರಣ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೀತಿಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಇದನ್ನು ಮೀನುಗಾರರ ಮುಂದಿಟ್ಟು ಚರ್ಚಿಸಿದ ಬಳಿಕ ಅವರ ಅಭಿಪ್ರಾಯ ಪಡೆದು ಸಚಿವ ಸಂಪುಟದಲ್ಲಿ ಮಂಡಿಸಲಾಗುವುದು. ಈ ನೀತಿಯಲ್ಲಿ ಒಳನಾಡು ಮತ್ತು ಕಡಲು ಮೀನುಗಾರಿಕೆಯ ದೋಣಿ ತಂಗುದಾಣ, ಜೆಟ್ಟಿ ನಿರ್ಮಾಣ, ಯಾಂತ್ರಿಕೃತ ದೋಣಿಗಳಿಗೆ ಬೇಕಾದ ಮೂಲಭೂತ ಸೌಕರ್ಯ, ಮೀನುಗಾರರ ಬದುಕಿನ ಭದ್ರತೆ, ನಮ್ಮ ರಾಜ್ಯದ ಮೀನುಗಾರರಿಗೆ ಬೇರೆ ರಾಜ್ಯದಲ್ಲಿ ಕೊಡುವ ಕಿರುಕುಳ, ಮೀನುಗಾರಿಕಾ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ ಪರಿಹಾರ ಕ್ರಮ ರೂಪಿಸಲಾಗುವುದು ಎಂದರು.
ಮಂಗಳೂರು ಮತ್ತು ಮಲ್ಪೆ ಬಂದರಿನಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಚೆನ್ನೈ ಐಐಟಿ ತಾಂತ್ರಿಕ ವರದಿ ನೀಡಲಿದ್ದು, ಪ್ರತಿ ಜೆಟ್ಟಿಗೆ 6.5 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದರು.