ಕರ್ನಾಟಕ

karnataka

ETV Bharat / city

ವಲಸೆ ಕಾರ್ಮಿಕರು ಜಮಾಯಿಸಲು ಜಿಲ್ಲಾಡಳಿತವೇ ಕಾರಣ: ಐವಾನ್ ಡಿಸೋಜಾ - Corona Virus Update

ತವರೂರಿಗೆ ತೆರಳಲು ವಲಸೆ ಕಾರ್ಮಿಕರಿಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾದ ಸೇವಾ ಸಿಂಧು ವೆಬ್​ಸೈಟ್​​​ ಈಗ ಸರ್ವರ್ ಡೌನ್​​​​ನಿಂದ ಕೂಡಿದೆ. ಹೀಗಾಗಿ ಅವರಿಗೆ ಜಿಲ್ಲಾಡಳಿತ ಸ್ಪಷ್ಟ ಮಾಹಿತಿ ನೀಡಿದ ಕಾರಣ ಗೊಂದಲ ಸೃಷ್ಟಿಸಿದೆ ಎಂದು ಐವಾನ್ ಡಿಸೋಜಾ ಹೇಳಿದರು.

Migrant workers in chaos
ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ

By

Published : May 8, 2020, 7:38 PM IST

Updated : May 8, 2020, 8:40 PM IST

ಮಂಗಳೂರು: ಸರಿಯಾದ ಮಾಹಿತಿ ಸಿಗದ ಕಾರಣ ತಮ್ಮ ಊರುಗಳಿಗೆ ತೆರಳಲು ರೈಲ್ವೆ, ಬಸ್​ ನಿಲ್ದಾಣ, ಮಹಾನಗರ ಪಾಲಿಕೆ ಮುಂಭಾಗ ವಲಸೆ ಕಾರ್ಮಿಕರು ಜಮಾಯಿಸುತ್ತಿದ್ದಾರೆ. ಜಿಲ್ಲಾಡಳಿತ ಗೊಂದಲ ಸೃಷ್ಟಿಸುತ್ತಿದೆಯೇ ಹೊರತು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕಾದ ಸೇವಾ ಸಿಂಧು ವೆಬ್​ಸೈಟ್​​​ ಈಗ ಸರ್ವರ್ ಡೌನ್​​​​ನಿಂದ ಕೂಡಿದೆ. ಹೀಗಾಗಿ, ನಿಲ್ದಾಣಗಳಲ್ಲಿ ಜನಸಂದಣಿ ಉಂಟಾಗುತ್ತಿದೆ‌. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಾರ್ಖಂಡ್​​, ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ನಡುವೆ ಸಂವಹನ ಕೊರತೆಯೇ ಇದಕ್ಕೆ ಕಾರಣ ಎಂದು ಕಿಡಿಕಾರಿದರು.

ಅಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಧರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಂದೆ ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏಕೆ ಅಂತಾರಾಜ್ಯಗಳ ನಡುವೆ ಸಂವಹನ ನಡೆಸಿಲ್ಲ ಎಂದು ಪ್ರಶ್ನಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ವಲಸೆ ಕಾರ್ಮಿಕರ ಬಗ್ಗೆ ಸಂಸದ ಹಾಗೂ ಮಂಗಳೂರಿನ ಶಾಸಕರಿಬ್ಬರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ‌. ನಗರಕ್ಕೆ ಕಾಡುಕೋಣ ಬಂದಾಗ ಶಾಸಕರಿಗೆ ಹೋಗಲು ಸಮಯ ಇದೆ. ಆದರೆ, ಎರಡು ದಿನಗಳಿಂದ ನರಳುತ್ತಿರುವ ಕಾರ್ಮಿಕರನ್ನು ನೋಡಲು ಸಮಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವರ್ ಡೌನ್ ಇದ್ದಲ್ಲಿ ವಲಸೆ ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡಿ ಜನ ಜಂಗುಳಿ ಸೇರದಂತೆ ಜವಾಬ್ದಾರಿ ಜಿಲ್ಲಾಡಳಿತ ವಹಿಸಿಕೊಳ್ಳಬೇಕು. ಆದರೆ, ಅದನ್ನು ಮಾಡಲಿಲ್ಲ.‌ ಇದಕ್ಕೆಲ್ಲಾ ಜಿಲ್ಲೆಯ ಸಂಸದರು ಉತ್ತರ ನೀಡಬೇಕು‌. ಒಂದು ವೇಳೆ ಮಂಗಳೂರು ಮತ್ತೊಮ್ಮೆ ಲಾಕ್​​​​ಡೌನ್​​​​ಗೆ ಒಳಪಟ್ಟರೆ ಅದಕ್ಕೆ ನಳಿನ್ ಕುಮಾರ್ ಕಟೀಲು ಅವರೇ ಕಾರಣ ಎಂದು ಹೇಳಿದರು.

Last Updated : May 8, 2020, 8:40 PM IST

ABOUT THE AUTHOR

...view details