ಕರ್ನಾಟಕ

karnataka

ETV Bharat / city

'ಬಿಪಿಎಲ್ ಕಾರ್ಡುದಾರರಿಗೆ 3 ತಿಂಗಳ ವಿದ್ಯುತ್ ಬಿಲ್ ಮನ್ನಾ': ವದಂತಿಗೆ ಮೆಸ್ಕಾಂ ಸ್ಪಷ್ಟನೆ - mescom clarifies,

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುತ್ತದೆ. ಅದಕ್ಕಾಗಿ ಬಿಪಿಎಲ್ ಕಾರ್ಡು ಹೊಂದಿರುವ ಮನೆಯ ಸ್ಥಾವರಗಳ ಆರ್ ಆರ್ ಸಂಖ್ಯೆಯನ್ನು 3 ದಿನಗಳೊಳಗಾಗಿ ನೀಡಲು ಸೂಚಿಸಲಾಗಿದೆ ಎಂದು ಮೆಸ್ಕಾಂ ಲೆಟರ್ ಹೆಡ್ ಇದ್ದ ಪತ್ರವೊಂದು ವೈರಲ್​ ಆಗಿತ್ತು. ಈ ಕುರಿತು ಮೆಸ್ಕಾಂ ಎಂಡಿ ಸ್ಪಷ್ಟನೆ ನೀಡಿದ್ದಾರೆ.

3-months-electricity-bill-waiver-for-bpl-cardholders
ಮೆಸ್ಕಾಂ

By

Published : Jun 14, 2021, 7:17 PM IST

ಮಂಗಳೂರು: ಬಿಪಿಎಲ್ ಕಾರ್ಡ್​ ಹೊಂದಿರುವ ಮನೆಯ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುತ್ತದೆ ಎಂಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಸಹಿ ಇರುವ ಪತ್ರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಇದೊಂದು ಫೇಕ್ ಪತ್ರ, ವದಂತಿ ಬಗ್ಗೆ ಯಾರೂ ಕಿವಿಕೊಡಬಾರದೆಂದು ಮೆಸ್ಕಾಂ‌ ಎಂಡಿ ಪ್ರಶಾಂತ್ ಮಿಶ್ರಾ ಹೇಳಿದ್ದಾರೆ.

ಬಿಪಿಎಲ್ ಕಾರ್ಡುದಾರರಿಗೆ 3 ತಿಂಗಳ ವಿದ್ಯುತ್ ಬಿಲ್ ಮನ್ನಾ

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುತ್ತದೆ. ಅದಕ್ಕಾಗಿ ಬಿಪಿಎಲ್ ಕಾರ್ಡು ಹೊಂದಿರುವ ಮನೆಯ ಸ್ಥಾವರಗಳ ಆರ್ ಆರ್ ಸಂಖ್ಯೆಯನ್ನು 3 ದಿನಗಳೊಳಗಾಗಿ ನೀಡಲು ಸೂಚಿಸಲಾಗಿದೆ ಎಂದು ಮೆಸ್ಕಾಂ ಲೆಟರ್ ಹೆಡ್ ಇದ್ದ ಪತ್ರವೊಂದು ವೈರಲ್​ ಆಗಿತ್ತು. ಈ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಈ ಕುರಿತು ಮೆಸ್ಕಾಂ ಎಂಡಿ ಸ್ಪಷ್ಟನೆ ನೀಡಿದ್ದು, ಇದೊಂದು ಫೇಕ್ ಪತ್ರ, ಯಾರೂ ಈ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತಿಳಿಸಿದ್ದಾರೆ.

ABOUT THE AUTHOR

...view details