ಮಂಗಳೂರು: ವಿವಾಹಿತ ಮಹಿಳೆ ಶಿಲ್ಪಾ ಎಂಬವರು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಗುರುಪುರದ ಭಜನಾ ಮಂದಿರ ಸಮೀಪದಲ್ಲಿ ನಡೆದಿದೆ.
ಮಂಗಳೂರಿನಲ್ಲಿ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ - married girls suicide in mangalore
ಮಂಗಳೂರಿನ ಹೊರವಲಯದ ಗುರುಪುರದಲ್ಲಿ ವಿವಾಹಿತೆಯೊಬ್ಬರು ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಶಿಲ್ಪಾ (28) ನೇಣಿಗೆ ಶರಣಾದವರು. ಬಜ್ಪೆಯ ಜ್ಯುವೆಲ್ಲರಿ ಅಂಗಡಿ ಮಾಲೀಕರ ಪುತ್ರಿಯಾಗಿರುವ ಇವರು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಲಾಕ್ಡೌನ್ ಬಳಿಕ ತವರಿಗೆ ಬಂದು, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಪತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, 11 ತಿಂಗಳ ಮಗು ಇದೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 12, 2020, 9:10 PM IST