ಸುಳ್ಯ : ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8 ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಸುಳ್ಯದಲ್ಲಿ ಗಾಂಜಾ ಸಾಗಾಟ : ಇಬ್ಬರು ಆರೋಪಿಗಳ ಬಂಧನ - ಗಾಂಜಾ ಸಾಗಾಟ ಆರೋಪಿಗಳ ಬಂಧನ
ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 8 ಕೆ.ಜಿ. 208 ಗ್ರಾಂ ಗಾಂಜಾ ಮತ್ತು ಕೇರಳ ನೋಂದಣಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ..
![ಸುಳ್ಯದಲ್ಲಿ ಗಾಂಜಾ ಸಾಗಾಟ : ಇಬ್ಬರು ಆರೋಪಿಗಳ ಬಂಧನ Marijuana transport accused arrested by sulya police](https://etvbharatimages.akamaized.net/etvbharat/prod-images/768-512-9453664-134-9453664-1604659870992.jpg)
ಗಾಂಜಾ ಸಾಗಾಟ
ಕಾಸರಗೋಡು ಮುಂಡೋಳು ಅಟ್ಟಂಚಾಲ್ನ ಮುರುವ ಮನೆ ಎಮ್. ಎ. ಅಬ್ಬಾಸ್ (63) ಹಾಗೂ ಕಾಸರಗೋಡು ಮೊಯಿನಾಬಾದ್ ಅಬ್ದುಲ್ ಕುಇ (50) ಬಂಧಿತ ಆರೋಪಿಗಳು.
ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರ ಮಾರ್ಗದರ್ಶನದಲ್ಲಿ ಎಸ್.ಐ. ಹರೀಶ್ ಎಂ.ಆರ್. ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. 8 ಕೆ.ಜಿ 208 ಗ್ರಾಂ ಗಾಂಜಾದ ಮೌಲ್ಯ 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸ್ವಿಫ್ಟ್ ಕಾರು(KL 14 V 7008)ನ್ನು ವಶಕ್ಕೆ ಪಡೆಯಲಾಗಿದೆ.