ಕರ್ನಾಟಕ

karnataka

ETV Bharat / city

ಫೀಲ್ಡಿಗಿಳಿದ ಪೊಲೀಸ್ ಕಮಿಷನರ್: ದಂಡ ವಿಧಿಸಿ, ಅಂಗಡಿಗಳು ಬಂದ್ - ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸ್ ಕಮಿಷನರ್

ಮಂಗಳೂರಿನಲ್ಲಿ ಕೋವಿಡ್​ ನಿಯಮ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವ ಪೊಲೀಸ್​ ಕಮಿಷನರ್​ ಸ್ವತಃ ತಾವೇ ಫೀಲ್ಡಿಗಿಳಿದಿದ್ದು, ಕೆಲವು ಅಂಗಡಿಗಳನ್ನು ಬಂದ್​ ಮಾಡಿಸಿದ್ದಾರೆ.

POLICE
POLICE

By

Published : Apr 23, 2021, 4:14 PM IST

Updated : Apr 23, 2021, 6:27 PM IST

ಮಂಗಳೂರು:ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಫೀಲ್ಡಿಗಿಳಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ಅಗತ್ಯ ವಸ್ತುಗಳನ್ನು ಹೊರತುಪಡಿಸಿದ ಎಲ್ಲಾ ಅಂಗಡಿಗಳಿಗೆ ದಂಡ ವಿಧಿಸಿ, ಬಂದ್ ಮಾಡಿಸಿದರು.

ಫೀಲ್ಡಿಗಿಳಿದ ಪೊಲೀಸ್ ಕಮಿಷನರ್: ದಂಡ ವಿಧಿಸಿ, ಅಂಗಡಿಗಳು ಬಂದ್

ನಗರದ ಕ್ಲಾಕ್ ಟವರ್​ನಿಂದ ಪರಿಶೀಲನೆ ಆರಂಭಿಸಿದ ಅವರು ಸೆಂಟ್ರಲ್ ಮಾರುಕಟ್ಟೆ, ಮಿಲಾಗ್ರಿಸ್, ಬಲ್ಮಠ ಮಾರ್ಗವಾಗಿ ಫಳ್ನೀರ್​ನಿಂದ ಕಂಕನಾಡಿವರೆಗೆ ಸುಮಾರು ಅಂಗಡಿಗಳನ್ನು ಬಂದ್ ಮಾಡಿಸಿದರು. ಅಲ್ಲದೇ ಮಲಬಾರ್ ಗೋಲ್ಡ್, ಕೆಟಿಎಂ ಸ್ಟೋರ್, ಬ್ರ್ಯಾಂಡ್ ಫ್ಯಾಕ್ಟ್ರಿ ಮುಂತಾದ ಶೋ ರೂಂಗಳನ್ನು ದಂಡ ವಿಧಿಸಿ ಬಂದ್ ಮಾಡಿಸಿದರು. ಸುಮಾರು ಐದು ಕಿ.ಮೀ.ನಷ್ಟು ಪ್ರದೇಶದಲ್ಲಿ ಕಮಿಷನರ್ ನಡಿಗೆ ಮೂಲಕವೇ ರೈಡ್ ಮಾಡಿ ಪರಿಶೀಲನೆ ನಡೆಸಿದರು.

ರೈಡ್ ವೇಳೆ ದಾರಿಯಲ್ಲಿ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲನೆ ಮಾಡಿರುವ ಹಿರಿಯ ನಾಗರಿಕರು, ಮಕ್ಕಳಿಗೆ ಗುಲಾಬಿ ಕೊಟ್ಟು ಅಭಿನಂದಿಸಲಾಯಿತು. ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಎಸಿಪಿ‌ ನಟರಾಜ್, ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Last Updated : Apr 23, 2021, 6:27 PM IST

ABOUT THE AUTHOR

...view details