ಕರ್ನಾಟಕ

karnataka

ETV Bharat / city

ಜೆಡಿಎಸ್​​ನಿಂದ ಬಂದವರಿಗೆ ಮಂಗಳೂರು ಪಾಲಿಕೆ ಚುನಾವಣೆ ಟಿಕೆಟ್​ ಕೊಟ್ಟ ಕಾಂಗ್ರೆಸ್​​: ಭುಗಿಲೆದ್ದ ಆಕ್ರೋಶ - ಮಂಗಳೂರು ಸುದ್ದಿ

ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡಿದ್ದು, ಮಾಜಿ ಶಾಸಕ ಜೆ.ಆರ್​.ಲೋಬೋ ವಿರುದ್ಧ ಕಾಂಗ್ರೆಸ್​ ಟಿಕೆಟ್ ವಂಚಿತ ಬಿಲಾಲ್​ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಟಿಕೆಟ್ ವಂಚಿತ ಬಿಲಾಲ್​ ಬೆಂಬಲಿಗರ ಆಕ್ರೋಶ

By

Published : Oct 31, 2019, 8:02 AM IST

ಮಂಗಳೂರು:ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡಿದ್ದು, ಮಾಜಿ ಶಾಸಕ ಜೆ.ಆರ್​.ಲೋಬೋ ವಿರುದ್ಧ ಕಾಂಗ್ರೆಸ್​ ಟಿಕೆಟ್ ವಂಚಿತ ಬಿಲಾಲ್​ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಟಿಕೆಟ್ ವಂಚಿತ ಬಿಲಾಲ್​ ಬೆಂಬಲಿಗರ ಆಕ್ರೋಶ

ಮಾಜಿ ಸಚಿವ ರಮಾನಾಥ ರೈ,‌‌ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪತ್ರಿಕಾಗೋಷ್ಠು ಮುಗಿಸಿ ಹೊರಬರುತ್ತಿದ್ದಂತೆ,ಬಿಲಾಲ್ ಬೆಂಬಲಿಗರು ಟಿಕೆಟ್ ನಿರಾಕರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ಜೆಡಿಎಸ್​ನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಮಾಜಿ ಶಾಸಕ ಜೆ.ಆರ್​.ಲೋಬೋ. ಅವರಿಗೆ ಧಿಕ್ಕಾರ, ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದೇವೆ. ಮಾತ್ರವಲ್ಲದೆ,ಮುಂದಿನ 30 ವರ್ಷ ಬಿಜೆಪಿಯ ವೇದವ್ಯಾಸ ಕಾಮತ್‌ ಶಾಸಕರಾಗಿ ಇರುತ್ತಾರೆ,' ಎಂದು ಘೋಷಣೆ ಕೂಗಿದರು.

ABOUT THE AUTHOR

...view details