ಮಂಗಳೂರು: 'ಫೈರ್ ಮಾಡಿದ್ರೂ ಒಬ್ಬರು ಸಾಯಲಿಲ್ಲ' ಎಂದು ಮಂಗಳೂರಿನ ಪೊಲೀಸ್ ಅಧಿಕಾರಿ ಶಾಂತರಾಮ್ ಕುಂದರ್ ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಅವರ ವಿರುದ್ಧ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
'ಫೈರ್ ಮಾಡಿದ್ರೂ ಒಬ್ಬರು ಸಾಯಲಿಲ್ಲ' ಎಂಬ ಹೇಳಿಕೆ ಆರೋಪ: ಪೊಲೀಸ್ ಅಧಿಕಾರಿ ವಿರುದ್ಧ ದೂರು - ಪೊಲೀಸ್ ಅಧಿಕಾರಿ ಶಾಂತರಾಮ್ ಕುಂದರ್ ನ್ಯೂಸ್
'ಫೈರ್ ಮಾಡಿದ್ರೂ ಒಬ್ಬರು ಸಾಯಲಿಲ್ಲ' ಎಂದು ಮಂಗಳೂರಿನ ಪೊಲೀಸ್ ಅಧಿಕಾರಿ ಶಾಂತರಾಮ್ ಕುಂದರ್ ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಅವರ ವಿರುದ್ಧ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲು
ಪೌರತ್ವ(ತಿದ್ದುಪಡಿ) ಕಾಯ್ದೆ ವಿರುದ್ಧ ಕಳೆದ ವಾರ ನಡೆದಿದ್ದ ಹಿಂಸಾಚಾರ ಪ್ರಕರಣದ ಸಂದರ್ಭದಲ್ಲಿ ಗಲಭೆ ನಿಯಂತ್ರಿಸುವ ಸಂದರ್ಭ ಕದ್ರಿ ಠಾಣಾ ಇನ್ಸ್ಪೆಕ್ಟರ್ ಶಾಂತರಾಮ್ ಕುಂದರ್ ಅವರು ಬಂದರ್‌ನ ಸಮೀಪ ಪ್ರತಿಭಟನಾಕಾರರನ್ನು ಗುಂಡು ಹಾರಿಸಿ ಕೊಲ್ಲುವ ಕುರಿತು ಆತಂಕಕಾರಿ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿನೋವನ್ನು ಆಧರಿಸಿ ಹನೀಫ್ ಕಾಟಿಪಳ್ಳ ಎಂಬುವರು ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.