ಮಂಗಳೂರು: ಬಂದರು ನಗರಿ ಹಿಂದೆಂದೂ ಇಲ್ಲದಂತಹ ನೀರಿನ ಬವಣೆ ಎದುರಿಸುತ್ತಿದೆ. ಆದರೆ ಮಂಗಳೂರಿನ ಗುಜ್ಜರಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇಂದು ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಮಳೆಗಾಲ ಆರಂಭವಾಗುವವರೆಗೂ ಪೂರೈಕೆ ಮಾಡುವಷ್ಟು ನೀರಿಲ್ಲ. ಗುಜ್ಜನಕೆರೆಯನ್ನೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಮಂಗಳೂರಿಗರನ್ನು ಸಂಕಷ್ಟಕ್ಕೀಡು ಮಾಡಿದೆ.
ಮಂಗಳೂರಿನ ಮಂಗಳಾ ದೇವಿ ದೇವಸ್ಥಾನದ ಬಳಿ ಇರುವ ಗುಜ್ಜರಕೆರೆ 3.43 ಎಕರೆ ಪ್ರದೇಶದಲ್ಲಿದೆ. ಈ ಕೆರೆ ಮಂಗಳೂರು ನಗರಕ್ಕೆ ಅಗತ್ಯವಿರುವ ಒಂದಷ್ಟು ಪ್ರಮಾಣದ ನೀರನ್ನು ಪೂರೈಸಬಲ್ಲದು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈ ಕೆರೆಯಲ್ಲಿ ಈಗ ಒಳಚರಂಡಿ ಕೊಳಚೆ ನೀರು ಶೇಖರಣೆಯಾಗಿದೆ.