ಮಂಗಳೂರು:ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಯನ್ನು ನಡೆಸಲು ವಿವಿ ದಿನಾಂಕ ಪ್ರಕಟಿಸಿದೆ.
ಮಂಗಳೂರು ವಿವಿ ಪರೀಕ್ಷಾ ದಿನಾಂಕ ಪ್ರಕಟ - ಮಂಗಳೂರು ವಿವಿ ಪರೀಕ್ಷೆ ಡೇಟ್
ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷಾ ದಿನಾಂಕ ಪ್ರಕಟಗೊಂಡಿದೆ.

Mangaluru VV Exam Date announced
2021ರ ಏಪ್ರಿಲ್ ನಲ್ಲಿ ನಡೆಯಬೇಕಿದ್ದ 1, 3, 5 ಮತ್ತು 7 ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಆಗಸ್ಟ್ 2 ರಿಂದ ನಡೆಸಲು ನಿರ್ಧರಿಸಲಾಗಿದೆ. 1 ಮತ್ತು 3 ನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಆ.5 ರಿಂದ ನಡೆಸಲು ಉದ್ದೇಶಿಸಲಾಗಿದೆ.
ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಾವಳಿ ಪಾಲನೆಯೊಂದಿಗೆ ಪರೀಕ್ಷೆ ನಡೆಯಲಿದೆ ಎಂದು ಮಂಗಳೂರು ವಿವಿ ಪ್ರಕಟನೆ ತಿಳಿಸಿದೆ.