ಮಂಗಳೂರು: ನಗರದಲ್ಲಿ ಕೊರೊನಾ ಕಠಿಣ ಕರ್ಫ್ಯೂ ನಡುವೆ ಅನಗತ್ಯ ತಿರುಗುತ್ತಿದ್ದವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಬಿಸಿ ಮುಟ್ಟಿಸಿದ್ದಾರೆ.
ಕೊರೊನಾ ಕರ್ಫ್ಯೂ ಇದ್ದರೂ ಮಂಗಳೂರು ನಗರದಲ್ಲಿ ಅನಗತ್ಯ ತಿರುಗಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಶುಕ್ರವಾರದಿಂದ ಕೊರೊನಾ ಕರ್ಫ್ಯೂವನ್ನು ಬಿಗಿಗೊಳಿಸಲು ನಿರ್ಧರಿಸಲಾಗಿತ್ತು.
ಮಂಗಳೂರಲ್ಲಿ ಪೊಲೀಸ್ ಆಯುಕ್ತರಿಂದ ದಿಢೀರ್ ದಾಳಿ: ಅನಗತ್ಯ ತಿರುಗುತ್ತಿದ್ದವರ ವಾಹನ ವಶ - ಮಂಗಳೂರು ಪೊಲೀಸ್ ಆಯುಕ್ತರಿಂದ ದಾಳಿ
ಶುಕ್ರವಾರದಿಂದ ಮಂಗಳೂರಲ್ಲಿ ಕಠಿಣ ಕರ್ಫ್ಯೂ ಜಾರಿಯಾಗುತ್ತಿರುವ ಹಿನ್ನೆಲೆ ಗುರುವಾರ ರಾತ್ರಿ ನಗರ ಪೊಲೀಸ್ ಆಯುಕ್ತರು ದಿಢೀರ್ ಕಾರ್ಯಾಚರಣೆ ನಡೆಸಿ, ಅನಗತ್ಯವಾಗಿ ಓಡಾಡುವವರಿಗೆ ಶಾಕ್ ನೀಡಿದ್ದಾರೆ.
ಮಂಗಳೂರಲ್ಲಿ ಪೊಲೀಸ್ ಆಯುಕ್ತರಿಂದ ದಿಢೀರ್ ದಾಳಿ
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಂಗಳೂರು ನಗರದ ಕೆಪಿಟಿ ಸರ್ಕಲ್ ಬಳಿ ದಿಢೀರ್ ದಾಳಿ ನಡೆಸಿದರು.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಲಾಗಿದೆ. ಅನಗತ್ಯ ತಿರುಗಾಡುತ್ತಿದ್ದವರ ಕಾರು, ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳಲ್ಲಿ ಅನಧಿಕೃತವಾಗಿ ಅಂಟಿಸಲಾಗಿದ್ದ ಅಗತ್ಯ ಸೇವೆ ಸ್ಟಿಕರ್ಗಳನ್ನು ಕಿತ್ತೆಗೆದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated : May 7, 2021, 5:38 AM IST