ಕರ್ನಾಟಕ

karnataka

ETV Bharat / city

ಮಂಗಳೂರು ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ 'ವೇಲ್' - mangalore whale news

ಸಾಗರ್ ಎಂಬ ಬೋಟು ಆಳಸಮುದ್ರ ಮೀನುಗಾರಿಕೆಗೆಂದು ಕಳೆದ 10 ದಿನಗಳ ಹಿಂದೆ ತೆರಳಿತ್ತು. 3 ದಿನಗಳ ಹಿಂದೆ ಈ ಮೀನುಗಾರರ ಬಲೆಗೆ ಬೃಹತ್ ಗಾತ್ರದ 'ವೇಲ್' ಬಿದ್ದಿದ್ದು, ತಿಮಿಂಗಿಲವನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ.

mangalore Fishermans got a 'whale' and leave it again To the sea
ಬಲೆಗೆ ಬಿತ್ತು ಬೃಹತ್ ಗಾತ್ರದ 'ವೇಲ್'

By

Published : Oct 26, 2021, 11:31 AM IST

Updated : Oct 26, 2021, 12:33 PM IST

ಮಂಗಳೂರು: ನಗರದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೃಹತ್ ಗಾತ್ರದ ತಿಮಿಂಗಿಲ ಸಿಕ್ಕಿದ್ದು, ಮರಳಿ ಸಮುದ್ರ ಸೇರಿದೆ.

ಮಂಗಳೂರು ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ 'ವೇಲ್'

ಸಾಗರ್ ಎಂಬ ಬೋಟ್ ಆಳ ಸಮುದ್ರ ಮೀನುಗಾರಿಕೆಗೆಂದು ಕಳೆದ 10 ದಿನಗಳ ಹಿಂದೆ ತೆರಳಿತ್ತು. 3 ದಿನಗಳ ಹಿಂದೆ 50 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಮಯದಲ್ಲಿ ಈ ಮೀನು ಬಲೆಗೆ ಬಿದ್ದಿತ್ತು‌. ಬಲೆ ಭಾರವಿದ್ದಿದ್ದರಿಂದ ಬಹಳಷ್ಟು ಮೀನುಗಳು ಬಲೆಗೆ ಬಿದ್ದಿವೆ ಎಂದು ಅರಿತ ಮೀನುಗಾರರು ಬಲೆಯನ್ನು ಮೇಲೆತ್ತಿದಾಗ ಬೃಹತ್ ಗಾತ್ರದ ಈ ಮೀನು ಪತ್ತೆಯಾಗಿದೆ.

ಆದರೆ ಈ 'ವೇಲ್' ಮೀನು ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವ ಹಿನ್ನೆಲೆಯಲ್ಲಿ ಇದನ್ನು ಹಿಡಿಯೋದನ್ನು ನಿಷೇಧಿಸಲಾಗಿದೆ. ಹಾಗಾಗಿ ಮೀನುಗಾರರು ಬಲೆಯನ್ನು ತುಂಡರಿಸಿ ಮತ್ತೆ ಸಮುದ್ರಕ್ಕೆ ತಿಮಿಂಗಿಲವನ್ನು ಜೀವಂತವಾಗಿ ಬಿಟ್ಟಿದ್ದಾರೆ.

ಇದನ್ನೂ ಓದಿ:ತವರು ಮನೆಗೆ ಕಳುಹಿಸದ ಬೇಸರ: ಮಕ್ಕಳನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆ

ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜರತ್ನ ಸನಿಲ್ ಈ ಬಗ್ಗೆ ಮಾಹಿತಿ ನೀಡಿ, 'ಸುಮಾರು 1,200 ಕೆಜಿ ತೂಕವುಳ್ಳ ಈ ಬೃಹತ್ ಮೀನನ್ನು ಸಮುದ್ರದಿಂದ ಮೇಲೆತ್ತುವಾಗ ಮೀನುಗಾರರ ಏರಿಕಂಬವೇ ತುಂಡಾಗಿದೆ. ಅಲ್ಲದೇ ಬಲೆಸಹಿತ ಬಿಟ್ಟರೂ ಮೀನು ಉಳಿಯುವುದಿಲ್ಲ. ಹಾಗಾಗಿ ಬಲೆಯನ್ನು ತುಂಡರಿಸಿ ಬಿಡಲಾಗಿದೆ. ಇದರಿಂದ ಮೀನುಗಾರರಿಗೆ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ, ಮೀನುಗಾರರು ಮೀನುಗಾರಿಕೆ ನಡೆಸಿ ದಡಕ್ಕೆ ಬಂದ ಬಳಿಕ ಈ ಸುದ್ದಿ ತಿಳಿದು ಬಂದಿದೆ ಎಂದು ಹೇಳಿದರು.

Last Updated : Oct 26, 2021, 12:33 PM IST

ABOUT THE AUTHOR

...view details