ಮಂಗಳೂರು:ಕುದ್ರೋಳಿ ಶ್ರೀ ಕ್ಷೇತ್ರದಿಂದ ಆಯೋಜನೆಗೊಳ್ಳುವ ಮಂಗಳೂರು ದಸರಾವನ್ನು ಈ ಬಾರಿಯೂ ಸರ್ಕಾರದ ನಿಯಮಾವಳಿಗಳ ಪ್ರಕಾರ 'ನಮ್ಮ ದಸರಾ-ನಮ್ಮ ಸುರಕ್ಷೆ'ಯಡಿ ಆಚರಿಸಲು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ.
'ನಮ್ಮ ದಸರಾ-ನಮ್ಮ ಸುರಕ್ಷೆ'ಯಡಿ ಮಂಗಳೂರು ದಸರಾ.. ಈ ಬಾರಿ ಅಕ್ಟೋಬರ್ 7 ರಿಂದ 16 ರವರೆಗೆ ಮಂಗಳೂರು ದಸರಾ ನಡೆಯಲಿದೆ. ಈ ಸಂದರ್ಭ ದಿನವೂ ಕುದ್ರೋಳಿ ದೇವಸ್ಥಾನದಲ್ಲಿ ಬೆಳಗ್ಗೆ 10 ರಿಂದ ಸಂಜೆಯವರೆಗೆ 5 ರವರೆಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಸಹ ನಡೆಯಲಿದೆ. ಲಸಿಕೆ ಪಡೆಯದ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶ ಕಡ್ಡಾಯ ನಿಷೇಧಿಸಲಾಗಿದೆ. ಅಲ್ಲದೇ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು.
ಅ. 7 ರಿಂದ 16 ರವರೆಗೆ ದೇವಳದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯ ದಿನ ಶ್ರೀ ನವದುರ್ಗೆಯರ ಸಹಿತ ಶ್ರೀ ಶಾರದಾಮಾತೆ, ಶ್ರೀ ಮಹಾಗಣಪತಿ ದೇವರ ವಿಗ್ರಹಗಳನ್ನು ದೇವಾಲಯದ ಪುಷ್ಕರಣಿಯಲ್ಲಿಯೇ ಜಲಸ್ತಂಭನ ಮಾಡಲಾಗುತ್ತದೆ.